ಬೆಂಗಳೂರು: ಎಲ್ಲಾ ಜಿಲ್ಲೆಗಳಿಗೂ ಸಿಎಂ ಬಸವರಾಜ್ ಬೊಮ್ಮಾಯಿ ಉಸ್ತುವಾರಿ ಸಚಿವರುಗಳನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಕೆಲವರಿಗೆ ಅಸಮಾಧಾನವನ್ನು ತರಿಸಿದೆ. ಆದ್ರೆ ಯಾರೂ ನೇರವಾಗಿ ಅಸಮಾಧಾನ ಹೊರ ಹಾಕುತ್ತಿಲ್ಲ.
ಇದೀಗ ಉಸ್ತುವಾರಿ ಬಗ್ಗೆ ವಸತಿ ಸಚಿವ ವಿ ಸೋಮಣ್ಣ ಮಾತನಾಡಿದ್ದು, ವರಿಷ್ಠರ ಸೂಚನೆಯ ಮೇರೆಗೆ ಉಸ್ತುವಾರಿ ಸಚಿವರನ್ನ ನೇಮಕ ಮಾಡಲಾಗಿದೆ. ಈ ರೀತಯ ಪ್ರಯೋಗಗಳು ಬೇರೆ ಬೇರೆ ಜಿಲ್ಲೆಯಲ್ಲೂ ನಡೆಯುತ್ತಿರುತ್ತವೆ. ಅದರಂತೆ ನಮ್ಮಲ್ಲಿಯೂ ಆ ಪ್ರಯೋಗವನ್ನ ಮಾಡಿದ್ದಾರೆ ಅಷ್ಟೇ. ನಾನು ಈ ನಿರ್ಧಾರವನ್ನ ಗೌರವಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು ಉಸ್ತುವಾರಿಯನ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಇಟ್ಟುಕೊಂಡಿದ್ದಾರೆ. ಅದು ಅವರ ಬಳಿ ಇಟ್ಟುಕೊಳ್ಳುವುದೇ ಸೂಕ್ತ. ಈ ಬಗ್ಗೆ ವರಿಷ್ಠರು ಮತ್ತು ಹೈಕಮಾಂಡ್ ನವರು ತೀರ್ಮಾನ ಮಾಡಿಯೇ ಉಸ್ತುವಾರಿ ಹಂಚಿಕೆ ಮಾಡಿದ್ದಾರೆ. ನಾನು ಕೂಡ ಬೆಂಗಳೂರು ಉಸ್ತುವಾರಿಯನ್ನ ಕೇಳಿದ್ದೆ. ಅದನ್ನ ಬೇರೆ ಯಾರಿಗೂ ನೀಡಿಲ್ಲ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆಗೆ ಹಂಚಿಕೆ ಮಾಡಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.