ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಪಕ್ಷ ತೊರೆಯುವುದಾಗಿ ಹೇಳಿದ್ದರು. ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿದ ಸಿ ಎಂ ಇಬ್ರಾಹಿಂ, ನಾನು ಸ್ವಾಭಿಮಾನದಿಂದ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ. ರಾಜೀನಾಮೆ ಪತ್ರವನ್ನ ಸಿದ್ದರಾಮಯ್ಯ ಅವರಿಗೆ ಕಳುಹಿಸಿದ್ದೇನೆ. ರಾಜೀನಾಮೆ ಅಂಗೀಕಾರ ಮಾಡುವುದು ಅವರಿಗೆ ಬಿಟ್ಟ ವಿಚಾರ. ನಾನು ನನ್ನ ಜವಬ್ದಾರಿಯಿಂದ ಫ್ರೀಯಾಗಿದ್ದೇನೆ. ನಾನು ಮುಂದೆ ಏನು ಬೇಕಾದರೂ ತೀರ್ಮಾನಿಸಬಹುದು. ನೀವೂ ಪಕ್ಷ ತೊರೆಯಬೇಡಿ ಎಂದು ಜನರನ್ನು ಕಳುಹಿಸಿದ್ರು, ಪಕ್ಷ ತೊರೆಯಬೇಡಿ ಎಂದು ಟೀಕಿಸಿದ್ದರು. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಡಿಕೆಶಿಗೆ ಧನ್ಯವಾದಗಳು.
ಸಿದ್ದರಾಮಯ್ಯ ಹಾಗೂ ನನ್ನ ಇಷ್ಟಪಡುವ ಕಾರ್ಯಕರ್ತರಿಗೂ ಧನ್ಯವಾದಗಳು. ಕೆಲವರನ್ನ ಪಕ್ಷದಿಂದ ಅವರೇ ತಳ್ಳುತ್ತಿದ್ದಾರೆ. ಆದ್ರೆ ನನ್ನನ್ನು ತಳ್ಳುವ ಮೊದಲು ನಾನೇ ಬಂದಿದ್ದೇನೆ. ನನ್ನ ಜೊತೆ ಅನೇಕ ಜನ ಬರ್ತಿದ್ದಾರೆ. ಮುಂದೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಜೊತೆ ಚರ್ಚೆ ಮಾಡ್ತೇನೆ. ಚರ್ಚೆ ಮಾಡಿದ ಬಳಿಕ ಮುಂದಿನ ನಿರ್ಣಯ ಪ್ರಕಟ ಮಾಡುತ್ತೇನೆ ಎಂದಿದ್ದಾರೆ.