ಬೆಳಗಾವಿ: ತಣ್ಣಗಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸ್ವತಃ ರಮೇಶ್ ಜಾರಕಿಹೊಳಿ ಅವರೇ ಸುದ್ದಿಗೋಷ್ಠಿ ನಡೆಸಿ, ಸಿಡಿ ವಿಚಾರಕ್ಕೆ ಪ್ರೂಫ್ ಇದೆ. ಸಿಬಿಐಗೆ ವಹಿಸಬೇಕು ಎಂದಿದ್ದರು. ಇದೀಗ ಈ ಸಿಡಿ ವಿಚಾರವೇ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನನ್ನ ಮಕ್ಕಳು ಈ ಸಿಡಿ ವಿಚಾರದ ಬಗ್ಗೆ ಕೇಳುತ್ತಿದ್ದಾರೆ. ಸಿಡಿ ಅಂದ್ರೆ ಏನು..? ಆ ಸಿಡಿಯಲ್ಲಿ ಅಂಥದ್ದು ಏನಿದೆ ಎಂದು ಕೇಳುತ್ತಿದ್ದಾರೆ. ಮಕ್ಕಳಿಗೆ ಏನೆಂದು ಹೇಳಲಿ. ಥೂ.. ನಿಮ್ಮ ಜನ್ಮಕ್ಕೆ ಬೆಂಕಿ ಹಾಕ. ಬೆಳಗಾವಿ ಮಹಾನ್ ನಾಯಕರನ್ನು ಕೊಟ್ಟಂತ ಜಿಲ್ಲೆ. ಅವರು ಹೇಳುತ್ತಾರೆ ವಿಷಕನ್ಯೆ ಎಂದು. ಇವರು ಹೇಳುತ್ತಾರೆ ನಾಗಕನ್ಯೆ ಎಂದು. ಡಿಕೆ ಶಿವಕುಮಾರ್ ಹೇಳಿದ್ದು ಸತ್ಯ, ರಮೇಶ್ ಜಾರಕಿಹೊಳಿ ಹೇಳಿದ್ದು ಸತ್ಯವೇ. ಮಾನ ಮರ್ಯಾದೆ ಇದ್ದರೆ ಸಿಡಿ ಕೇಸನ್ನು ಸಿಬಿಐಗೆ ಒಪ್ಪಿಸಿ ಎಂದಿದ್ದಾರೆ.
ಈ ಸಿಡಿ ಪ್ರಕರಣದಲ್ಲಿ ಬ್ಲಾಕ್ ಮೇಲ್ ಮಾಡುತ್ತಲೇ ಬಂದಿದ್ದಾರೆ. ಪಾಪ ರಮೇಶ್ ಜಾರಕಿಹೊಳಿಯನ್ನು ಚೌರಾನೇ ಮಾಡಿಬಿಟ್ಟಿದ್ದಾರೆ. ಮೊದಲು ಈ ಕೇಸನ್ನು ಸಿಬಿಐಗೆ ವಹಿಸಲಿ ಎಂದು ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.