ಬೆಂಗಳೂರು ಉಸ್ತುವಾರಿ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ: ಅಶ್ವತ್ಥ ನಾರಾಯಣ್

suddionenews
1 Min Read

ಬೆಂಗಳೂರು: ಬೆಂಗಳೂರು ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿದ ವಿಚಾರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಹರಿಸಲಿದ್ದಾರೆ ಎಂದು ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ ಹೇಳಿದರು.

ಈ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಲ ಕಾಲಕ್ಕೆ ಸೂಕ್ತವಾದ ನಿರ್ಧಾರ ಸಿಎಂ ತೆಗೆದುಕೊಳ್ತಾರೆ. ಅದನ್ನು ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.‌

ಇನ್ನೂ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳ ಮೂಲಕವೂ ಈ ಆನ್-ಲೈನ್ ಕೋರ್ಸುಗಳನ್ನು ಸುಲಭವಾಗಿ ಕಲಿಯಬಹುದು. ನಾಸ್ಕಾಂನ ಈ ಕೋರ್ಸುಗಳು ಎನ್ಎಸ್ ಕ್ಯೂಎಫ್ ರೂಪಿಸಿರುವ ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಷೇತ್ರವು ಬೇಡುವಂತಹ ಕೌಶಲ್ಯಗಳನ್ನು ಬೆಳೆಸಲು ಒತ್ತು ಕೊಟ್ಟಿದೆ.

ಇದರಂತೆ, ಭಾರತವನ್ನು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಪ್ರತಿಭೆಗಳ ತೊಟ್ಟಿಲನ್ನಾಗಿ ಮಾಡುವುದು ಕೇಂದ್ರ ಸರಕಾರದ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಡೀ ದೇಶದಲ್ಲಿ ನಾಸ್ಕಾಂ ಜೊತೆ ಸೇರಿಕೊಂಡು ಇಂತಹ ಒಡಂಬಡಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ರಾಜ್ಯದಲ್ಲೂ ಡಿಜಿಟಲ್ ಯುಗಕ್ಕೆ ಸಮರ್ಥವಾಗಿ ಪರಿವರ್ತನೆ ಹೊಂದಲಾಗುವುದು. ಇದಕ್ಕಾಗಿ ರಾಜ್ಯ ಸರಕಾರವು ಯಾವುದೇ ವೆಚ್ಚವನ್ನು ಮಾಡಬೇಕಾಗಿಲ್ಲ, ಎಂದು ಎಂದರು.

ದೇಶದ ಐ.ಟಿ. ಸೇವಾ ವಲಯವು ಈಗ ವರ್ಷಕ್ಕೆ 150 ಶತಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ. ಇದು 2025ರ ಹೊತ್ತಿಗೆ 350 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲಿದೆ. ಈಗ ರಾಷ್ಟ್ರದಲ್ಲಿರುವ ಡಿಜಿಟಲ್ ಪ್ರತಿಭಾವಂತರಿಗಿಂತ ಎಂಟು ಪಟ್ಟು ಹೆಚ್ಚಿನ ಬೇಡಿಕೆ ಇದ್ದು, 2024ರ ಹೊತ್ತಿಗೆ ಇದು 20 ಪಟ್ಟು ಹೆಚ್ಚಾಗಲಿದೆ. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ, ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *