Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಪವರ್ ಶೇರಿಂಗ್ ಡೇಟ್ ಲಾಕ್ ಬೆನ್ನಲ್ಲೇ ಮುಖಾಮುಖಿಯಾ ಸಿಎಂ – ಡಿಸಿಎಂ : ಹೇಗಿತ್ತು ಎಕ್ಸ್ ಪ್ರೆಶನ್..?

---Advertisement---

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಶೇರಿಂಗ್ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗ್ತಾನೆ ಇದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗುವ ಭರವಸೆಯೊಂದಿಗೇನೆ ಸಾಗುತ್ತಾ ಇದ್ದಾರೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಓಡಾಡುತ್ತಿದೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಇದೀಗ ಸಿಎಂ ಹಾಗೂ ಡಿಸಿಎಂ ಮುಖಾಮುಖಿಯಾಗಿದ್ದಾರೆ.

ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನ. ವಿಧಾನಸೌಧದ ಮುಂಭಾಗದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆಗೆ ಹೂ ಮಾಲೆ ಹಾಕಿ, ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎದುರು ಬದುರಾಗಿದ್ದಾರೆ. ನಿನ್ನೆಯಷ್ಟೇ ಪವರ್ ಶೇರಿಂಗ್ ವಿಚಾರ ಸಾಕಷ್ಟು ಸದ್ದು ಮಾಡಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯವಿರಬಹುದಾ ಎಂದೇ ನಿರೀಕ್ಷೆ ಮಾಡಿದ್ದವರಿಗೆ ಅವರಿಬ್ಬರ ನಡವಳಿಕೆ ಶಾಕ್ ತಂದಿದೆ.

ಯಾಕಂದ್ರೆ ಇಬ್ಬರು ಸಹಜವಾಗಿಯೇ ಕಾಣಿಸಿಕೊಂಡಿದ್ದಾರೆ. ಆತ್ಮೀಯವಾಗಿಯೂ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಕಂಡೊಡನೆ ಡಿಸಿಎಂ ಡಿಕೆ ಶಿವಕುಮಾರ್ ನಗುಮುಖದಿಂದಾನೇ ಮಾತನಾಡಿದ್ದಾರೆ. ಇಬ್ಬರು ಹಸ್ತಲಾಘವ ಮಾಡಿಕೊಂಡು ಪರಸ್ಪರ ಆಹ್ವಾನ ನೀಡಿಕೊಂಡಿದ್ದಾರೆ. ಬಳಿಕ ತಾಯಿ ಭುವನೇಶ್ವರಿ ತಾಯಿ ಮೊದಲು ಸಿಎಂ ಸಿದ್ದರಾಮಯ್ಯ ಅವರು ಮಾಲೆ ಹಾಕಿ, ಹೂವನ್ನು ಚೆಲ್ಲಿ ನಮನ ಸಲ್ಲಿಸಿದರು. ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ನಮನ ಸಲ್ಲಿಸಿದರು. ಈ ಮೂಲಕ ಇಬ್ಬರ ನಡುವೆ ಮನಸ್ತಾಪಗಳು ಇರಬಹುದು ಎಂದುಕೊಂಡಿದ್ದವರಿಗೆ ತಿರುಗೇಟು ನೀಡುವಂತೆ ನಗುಮುಖದಲ್ಲಿಯೇ ನಡೆದುಕೊಂಡಿದ್ದಾರೆ.

Join WhatsApp

Join Now

Join Telegram

Join Now