ಚಿಕ್ಕಮಗಳೂರು: ಜಿಲ್ಲೆಗೆ ಬೇಕಾದಷ್ಟು ಬಾರಿ ಬಂದಿದ್ದೀನಿ. ಆದರೆ ಸಿಎಂ ಆಗಿ ಮೊದಲ ಬಾರುಗೆ ಭೇಟಿ ನೀಡಿದ್ದೇನೆ. ಎರಡು ಬಾರಿ ಕಾರ್ಯಕ್ರಮ ಫಿಕ್ಸ್ ಆಗಿ ಮುಂದೂಡಿಕೆಯಾಗಿತ್ತು. ಈ ಬಾರಿ ಶಾರದಾಂಬೆಯ ದರ್ಶನ ಮಾಡಬೇಕಿತ್ತು ಮತ್ತು ಪೂಜಾರಿ ಅವರನ್ನು ಭೇಟಿಯಾಗಬೇಕಿತ್ತು. ಹೀಗಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಶಾರಾದಾಂಬೆ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾಡಿನ ಸುಭೀಕ್ಷೆಗಾಗಿ ಶಾರಾದಾಂಬೆಯನ್ನು ಪ್ರಾರ್ಥಿಸಿದ್ದೇನೆ.
ಹುಬ್ಬಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವ ಅಮಾಯಕರ ಬಂಧನವೂ ಆಗಿಲ್ಲ. ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ತನಿಖೆ ವೇಲಕೆ ಎಲ್ಲವನ್ನು ಪರಿಗಣಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ರಾವಣ ರಾಜ್ಯ ಮಾಡುವುದಕ್ಕೆ ಹೊರಟಿದ್ದಾರೆ ಎಂಬುದಕ್ಕೆ ಉತ್ತರಿಸಿ, ಅವರವರು ವ್ಯಾಖ್ಯಾನ ಮಾಡುತ್ತಾರೆ. ಜನ ಏನು ಹೇಳುತ್ತಾರೆ ಅನ್ನೋದಷ್ಟೇ ಮುಖ್ಯ. ವಿರೋಧ ಪಕ್ಷದವರಿಂದ ಬೇರೆನನ್ನು ಅಪೇಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಕ್ಕೆ ತಿರುಗೇಟು ಕೊಟ್ಟಿದ್ದಾರೆ.