ತುಮಕೂರು: ಇಂದು ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳ ಪುಣ್ಯ ಸ್ಮರಣೆ. ಈ ದಿನವನ್ನ ದಾಸೋಹ ದಿನವೆಂದೆ ಆಚರಿಸಲಾಗುತ್ತಿದೆ. ಈ ನಿಮಿತ್ತ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ.
ಮಠದ ಬಳಿ ಬಂದು ಕಾರಿನಿಂದ ಇಳಿಯುತ್ತಿದ್ದಂತೆ, ಸುತ್ತಲಿನ ದೃಶ್ಯ ನೋಡಿ ಸಿಎಂ ಕೋಪಗೊಂಡಿದ್ದಾರೆ. ಯಾಕಂದ್ರೆ ರಾಜ್ಯದಲ್ಲಿ ಕೊರೊನಾ ಕೇಸ್ ದಿನೇ ದಿನೇ ಅಂಕೆ ಶಂಕೆಗೂ ಸಿಗದೆ ಏರಿಕೆಯಾಗ್ತಾ ಇದೆ. ಹೀಗಿರುವಾಗ ಜನ ಗುಂಪು ಗುಂಪಾಗಿ ಸೇರಿದ್ರೆ ಕೊರೊನಾ ಮತ್ತಷ್ಟು ಹೆಚ್ಚಳವಾಗುವ ಭಯ. ಈ ಕಾರಣದಿಂದಾಗಿಯೇ ಸಿಎಂ ಕಾರು ಇಳಿಯುತ್ತಿದ್ದಂತೆ ಕಂಡ ಜನಸಂಖ್ಯೆ ಸಿಎಂ ಗೆ ಕೋಪ ಭರಿಸಿದೆ.
ಅಲ್ಲೇ ಇದ್ದ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾಕಿಷ್ಟು ಜನರನ್ನ ಸೇರಿಸಿದ್ದೀರಿ..? ಕೊರೊನಾ ಹೆಚ್ಚಾಗುತ್ತಿರುವುದು ಗೊತ್ತಿಲ್ಲವಾ..? ಸೀನಿಯರ್ ಆಫೀಸರ್ ಆಗಿದ್ದೀರಿ ಅಷ್ಟು ಗೊತ್ತಾಗೋದಿಲ್ಲವೇ..? ಎಲ್ಲರಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿ, ಮಾಸ್ಕ್ ಧರಿಸಲು ಹೇಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿ, ಕಾರ್ಯಕ್ರಮಕ್ಕೆ ತೆರಳಿದ ಘಟನೆ ನಡೆದಿದೆ.