ಪಂಜಾಬ್: ಫೆಬ್ರವರಿ 14 ರಿಂದ ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಪಂಜಾಬ್ ರೈತರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿ ರಾಷ್ಟ್ರೀಯ ಪಕ್ಷಗಳಿಗರ ನಡುಕ ಹುಟ್ಟಿಸಿವೆ. ಇದೀಗ ಈ ಬೆನ್ನಲ್ಲೇ ಚುನಾವಣೆಯನ್ನ ಮುಂದೂಡುವಂತೆ ಸಿಎಂ ಚನ್ನಿ ಮನವಿ ಮಾಡಿದ್ದಾರೆ.
ಸಿಎಂ ಚರಣ್ ಜಿತ್ ಸಿಂಗ್ ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದು, ಗುರು ರವಿದಾಸ್ ಜಯಂತಿ ಇರುವ ಕಾರಣ ಚುನಾವಣೆ ಮುಂದೂಡಿ ಎಂದಿದ್ದಾರೆ.
ಫೆಬ್ರವರಿ14 ರಂದು ನಡೆಯುವ ಚುನಾವಣೆ ಬೇಡ. ಆರು ದಿನಗಳ ಕಾಲ ಮುಂದೂಡಿ. ಜಯಂತಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಜ ದಲಿತ ಬಾಂಧವರು ಕಾಶಿ ಯಾತ್ರೆಗೆ ಹೋಗುತ್ತಾರೆ. ಹೀಗಾಗಿ ಅವರ್ಯಾರು ರಾಜ್ಯದಲ್ಲಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ದಯವಿಟ್ಟು ಒಂದು ವಾರಗಳ ಕಾಲ ಚುನಾವಣೆ ಮುಂದೂಡಿ ಎಂದು ಮನವಿ ಮಾಡಿದ್ದಾರೆ.