ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಯೇ ಬಹುದೊಡ್ಡ ವಿಚಾರವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನ ನಿಜಕ್ಕೂ ಬಿಟ್ಟು ಕೊಡ್ತಾರಾ..? ಇದೇ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಈ ಎಲ್ಲಾ ವಿಚಾರಗಳು ಸಹ ಬಹಳ ಕುತೂಹಲದತ್ತ ಸಾಗಿದೆ. ಇದಕ್ಕೊಂದು ಅಂತ್ಯ ಯಾವಾಗ ಎಂಬುದು ಎಲ್ಲರ ಪ್ರಶ್ನೆ. ಇದೀಗ ನವೆಂಬರ್ 29 ರಂದು ಇದಕ್ಕೊಂದು ಉತ್ತರ ಸಿಗಲಿದೆ ಎನ್ನಲಾಗಿದೆ.
ಈ ಸಮಸ್ಯೆ ಬಗೆಹರಿಯಬೇಕು ಅಂದರೆ ಅದು ಹೈಕಮಾಂಡ್ ನಿಂದ ಮಾತ್ರ ಸಾಧ್ಯ. ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಅಂತಾನೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ. ಇದೀಗ ರಾಜ್ಯ ಸರ್ಕಾರದ ಸಿಎಂ ಸ್ಥಾನದ ಗೊಂದಲ ಬಗೆಹರಿಸಲು ಹೈಕಮಾಂಡ್ ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂತು ಸಮಸ್ಯೆ ಬಗೆಹರಿಸಲಿದ್ದಾರೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹೈಕಮಾಂಡ್ ನಾಯಕರು ಸಮಸ್ಯೆಯ ಬಗ್ಗೆ ಚರ್ಚಿಸಿ, ತೀರ್ಮಾನಿಸಲಿದ್ದಾರೆ.
ಈಗಾಗಲೇ ಸಾಕಷ್ಟು ಬಾರಿ ಸಿಎಂ ಹಾಗೂ ಡಿಸಿಎಂ ಹೈಕಮಾಂಡ್ ಬಗ್ಗೆ ಹೇಳಿಕೆಗಳನ್ನ ನೀಡಿದ್ದಾರೆ. ಹೈಕಮಾಂಡ್ ಏನೇ ಹೇಳಿದರು ಅದಕ್ಕೆ ನಾವೂ ಬದ್ಧವಾಗಿರುತ್ತೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಹೈಕಮಾಂಡ್ ಹೇಳಿದಂತೆ ನಾನು ಮಾತ್ರವಲ್ಲ ಎಲ್ಲರು ನಡೆಯಲೇಬೇಕು ಎಂಬ ಮಾತನ್ನ ಹೇಳಿದ್ದಾರೆ. ಈಗ ಹೈಕಮಾಂಡ್ ಕೂಡ ಆ ಸಮಸ್ಯೆಗೊಂದು ಅಂತ್ಯವಾಡಲು ದಿನಾಂಕ ನಿಗದಿ ಮಾಡಿದೆ. ಅಂದು ಅಂದ್ರೆ ನವೆಂಬರ್ 29 ರಂದು ಈ ಸಮಸ್ಯೆಗೆ ಪರಿಹಾರ ಸಿಗುತ್ತಾ..? ಸಿಎಂ ಅವರೇ ಮುಂದುವರೆಯುತ್ತಾರಾ ಅಥವಾ ಸಿಎಂ ಬದಲಾವಣೆಯ ನಿರ್ಧಾರವಾಗುತ್ತ ಎಂಬುದನ್ನ ನೋಡಬೇಕಿದೆ.




