ಬೆಂಗಳೂರು: ಪರಿಷತ್ ನಲ್ಲಿ ಇಂದು ಕೆಪಿಎಸ್ಸಿ ಪರೀಕ್ಷೆಯ ಬಗ್ಗೆ ಚರ್ಚೆ ಮುನ್ನಲೆಗೆ ಬಂದಿದೆ. ಈ ಸಂಬಂಧ ಪರಿಷತ್ ಸದಸ್ಯ ನಸೀರ್ ಮಾತನಾಡಿದ್ದು, ಕೆಪಿಎಸ್ಸಿ 2008, 2010, 2014 ಬ್ಯಾಚ್ ಗಳ ಉತ್ತರ ಪತ್ರಿಕೆ ವಿಚಾರ, ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು RTI ಕಾಯ್ದೆಯಡಿ ನೀಡಿದ್ದಾರೆ. ಆದ್ರೆ 2015ನೇ ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆ ನೀಡ್ತಿಲ್ಲ. 50-60 ಅಭ್ಯರ್ಥಿಗಳಿಗೆ ಅವರ ಉತ್ತರ ಪತ್ರಿಕೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಪ್ರಸ್ತಾಪ ಮಾಡಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಈ ಪ್ರಕರಣದಲ್ಲಿ ಹಲವು ಕೋರ್ಟ್ ಆದೇಶಗಳಾಗಿವೆ. ಸದ್ಯ 2015ರ ಬ್ಯಾಚ್ ಪ್ರಕರಣ ಕೋರ್ಟ್ ನಲ್ಲಿದೆ, ಸ್ಟೇ ತರಲಾಗಿದೆ. ಎಲ್ಲಾ ಪ್ರಕರಣಗಳ ಮಾಹಿತಿ ತರಿಸಿಕೊಂಡು, ಅಭ್ಯರ್ಥಿಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.