ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಆರ್ಥಿಕ ಸಹಾಯ ಮಾಡಿದ್ದಾರೆ. ಇಂದು ಪ್ರವೀಣ್ ನೆಟ್ಟಾರು ಕುಟುಂಬವನ್ನು ಭೇಟಿ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ಹಾಗೂ ಬಿಜೆಪಿಯಿಂದ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಪೂರ್ವನಿಯೋಜಿತ ಕೃತ್ಯವೆಂಬಂತೆ ಕಾಣುತ್ತಿದೆ. ಕೇರಳದ ಗಡಿಯಲ್ಲಿಯೇ ಹತ್ಯೆ ನಡೆದಿರುವ ಕಾರಣ ಇದೊಂದು ವ್ಯವಸ್ಥಿತ ಕೊಲೆ ಎನ್ನಬಹುದು. ಹಲವಾರು ವರ್ಷಗಳಿಂದ ಕರಾವಳಿಯಲ್ಲಿ ಈ ರೀತಿ ಕೊಲೆ ಬಡೆಯುತ್ತಿರುವ ಕಾರಣ ಈ ಪ್ರಕರಣವನ್ನು ಗಂಭೀರವಗಿ ತೆಗೆದುಕೊಂಡಿದ್ದೇವೆ. ಪ್ರವೀಣ್ ಕೊಲೆ ಅತ್ಯಂತ ಖಂಡನೀಯವಾದದ್ದು. ಹತ್ಯೆ ಹಿಂದೆ ಯಾವುದೆ ಸಂಘಟಬೆ ಇದ್ದರು ಬಂಧಿಸುತ್ತೇವೆ ಎಂದಿದ್ದಾರೆ.