ಬೆಂಗಳೂರು: ನಾಳೆ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ವರಿಷ್ಠರ ಜೊತೆ ಮಹತ್ವದ ಚರ್ಚೆ ಮಾಡಲಿದ್ದಾರೆ. ಪಕ್ಷದ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಷಾರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಸಿಎಂ ಆದ ನಂತರ 11 ನೇ ಬಾರಿ ದೆಹಲಿಗೆ ತೆರಳುತ್ತಿರುವ ಸಿಎಂ, ಅವರ ದೆಹಲಿ ಪ್ರವಾಸ ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಸಿಎಂ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ಬೆನ್ನಲ್ಲೆ ಮತ್ತೆ ಸಚಿವ ಸಂಪುಟ ವಿಸ್ತರಣೆ, ಪುನರಚನೆ ಚರ್ಚೆ ಗರಿಗೆದರಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಹೋದ ನಂತರ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಚುನಾವಣೆ ಬೇರೆ ಸಮೀಪಿಸುತ್ತಿದೆ. ಇಂಥ ಸಮಯದಲ್ಲೂ ಸಚಿವ ಸಂಪುಟ ಹಾಗೆ ಬಿಡುವುದಕ್ಕಿಂತ ಮುಂದುವರೆಯುವ ಯೋಜನೆಯಲ್ಲಿದ್ದಾರೋ ಏನೋ.
ಒಟ್ಟಾರೆ ಸಚಿವಕಾಂಕ್ಷಿಗಳು ಪಟ್ಟಿ ಕೂಡ ಸಾಕಷ್ಟು ದೊಡ್ಡದಾಗಿದೆ. ಹೀಗಾಗಿ ಅದ್ಯಾವಾಗ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗುತ್ತೋ ಎಂದು ಕುತೂಹಲದ ಕಣ್ಗಳಲ್ಲಿ ಕಾಯುತ್ತಿರುವವರಿಗೆ ಈ ಸಲದ ಸಿಎಂ ಭೇಟಿ ಶುಭ ಸುದ್ದಿ ನೀಡುತ್ತಾ ಎಂಬುದನ್ನು ನೋಡಬೇಕಿದೆ.