ಬೆಂಗಳೂರು: 2023-24ರ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ರೈತರಿಗೂ ಬಂಪರ್ ಬಜೆಟ್ ಘೋಷಣೆ ಮಾಡಲಾಗಿದೆ.
39,031 ಕೋಟಿ ಕೃಷಿಗಾಗಿ ಮೀಸಲಿಡಲಾಗಿದೆ. 50 ಲಕ್ಷ ರೈತರಿಗೆ ಭೂಸಿರಿ ಯೋಜನೆಯಿಂದ ಅನುಕೂಲ. ಸಮುದ್ರ ಸೇರುವ ನೀರನ್ನು ತಡೆ ಹಿಡಿದು ಕೃಷಿಗೆ ಬಳಸುವ ಯೋಜನೆಯನ್ನು ಅನುಷ್ಠಾನ.ಕೆಸಿ ವ್ಯಾಲಿ ವಿವಿಧ ಯೋಜನೆಯಡಿ ಬೆಂಗಳೂರಿಗೆ ನೀರು ಹರಿಸುವ ಯೋಜನೆ.
38 ಕುಡಿಯುವ ನೀರು ಯೋಜನೆಗೆ ಅನುದಾನ. ಮಹದಾಯಿ ಯೋಜನೆಗೆ 1 ಸಾವಿರ ಕೋಟಿ ರೈತ ಸಂಪದಕ್ಕಾಗಿ 100 ಕೋಟಿ ಮೀಸಲು. ತೀರ್ಥಹಳ್ಳಿ ಕೃಷಿ ಸಂಶೋಧನಾ ಕೇಂದ್ರಕ್ಕೆ 10 ಕೋಟಿ. ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ವಿಸ್ತರಣೆ. ಕಿರುಧಾನ್ಯ ಬೆಳೆಗಾರರಿಗೆ 10 ಸಾವಿರ ಪ್ರೋತ್ಸಾಹ ಧನ. ಹಾಲು ಉತ್ಪಾದಕರಿಗೆ 1,067 ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ರೈತರಿಗೆ ಬರೋಬ್ಬರಿ 5 ಲಕ್ಷ ಸಾಲ ಘೋಷಣೆ. ಚಿಕ್ಕಮಗಳೂರಿನಲ್ಲಿ ಹೊಸ ವಿವಿ ನಿರ್ಮಾಣ. ಬೆಂಗಳೂರಿನಲ್ಲಿ ಶಂಕರ್ ನಾಗ್ ಹೆಸರಿನಲ್ಲಿ ನಿಲ್ದಾಣ.