ವಿಜಯನಗರ: ಇತ್ತಿಚೆಗೆ SC/ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದ ಸಿಎಂ ಬಸವಾರಜ್ ಬೊಮ್ಮಾಯಿ ಅವರು ಇಂದು ದಲಿತರ ಮನೆಗೆ ಹೋಗಿ ಉಪಹಾರ ಸೇವಿಸಿದ್ದಾರೆ. ಕಮಲಾಪುರದ ದಲಿತ ಮುಖಂಡರ ಮನೆಯಲ್ಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಉಪಹಾರ ಸೇವಿಸಿದ್ದಾರೆ.
ಬಿಜೆಪಿ ಕರ್ನಾಟಕ #JanaSankaplaYatre ಯ ಅಂಗವಾಗಿ ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ದಲಿತ ಕುಟುಂಬ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದೆನು. ಈ ಸಂದರ್ಭದಲ್ಲಿ ಶ್ರೀ @BSYBJP ಹಾಗೂ ಇತರರು ಉಪಸ್ಥಿತರಿದ್ದರು. @BJP4Karnataka pic.twitter.com/nlMIbtM8rt
— Basavaraj S Bommai (@BSBommai) October 12, 2022
ಬಿಜೆಪಿ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಇಂದು ಹೊಸಪೇಟೆಟ ಹಾಗೂ ಕೊಪ್ಪಳದಲ್ಲಿ ನಡೆಯುತ್ತಿದೆ. ಈ ವೇಳೆ ಕಮಲಾಪುರದ ದಲಿತ ಮುಖಂಡ ಕೊಲ್ಲಾರಪ್ಪ ಅವರ ಮನೆಗೆ ಸಿಎಂ ಮತ್ತು ಬಿಎಸ್ವೈ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರು ಪಟಾಕಿ ಸಿಡಿಸಿ, ಸ್ವಾಗತ ಕೋರಿದ್ದಾರೆ. ಅಲ್ಲಿಯೇ ಇದ್ದ ಈಶ್ವರ ದೇವಸ್ಥಾನಕ್ಕೂ ಸಿಎಂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೊಲ್ಲಾರಪ್ಪ ಮನೆಗೆ ಹೋಗಿ ಉಪ್ಪಿಟ್ಟು, ಒಗ್ಗರಣೆ ಮಿರ್ಚಿ, ಕೇಸರಿ ಬಾತ್ ಸವಿದಿದ್ದಾರೆ.
ಈ ಬಗ್ಗೆ ಯಲ್ಲಮ್ಮ ಮಾತನಾಡಿದ್ದು, ಸಿಎಂ ನಮ್ಮ ಮನೆಗೆ ಬಂದಿದ್ದು ತುಂಬಾ ಖುಷಿ ಕೊಟ್ಟಿದೆ. ನಾವೂ ಬಡವರು ಸಿಎಂ ಬಳಿ ಏನನ್ನು ಕೇಳಿಲ್ಲ. ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಅವರೇ ಸಹಾಯ ಮಾಡುತ್ತಾರೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಬಿಜೆಪಿ ಕರ್ನಾಟಕ #JanaSankaplaYatreಯ ಅಂಗವಾಗಿ ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ದಲಿತ ಕುಟುಂಬ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದೆನು. ಈ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಇತರರು ಉಪಸ್ಥಿತರಿದ್ದರು ಎಂದು ಟ್ವೀಟ್ ಮಾಡಿದ್ದಾರೆ.