ಹುಬ್ಬಳ್ಳಿ: ಹಿಂದಿ ರಾಷ್ಟಭಾಷೆ ಎಂಬ ಅಜಯ್ ದೇವಗನ್ ಟ್ವೀಟ್ ಗೆ ನಮ್ಮ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಇದೀಗ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ಸುದೀಪ್ ಅವರು ಹೇಳಿರುವಂತದ್ದು ಸರಿ ಇದೆ. ನಮ್ಮ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳು ಆದ ಮೇಲೆ, ಸ್ಥಳೀಯ ಭಾಷೆಗಳಿಗೆ ಮಹತ್ವವಿದೆ. ಅದೇ ಸಾರ್ವಭೌಮ. ಸುದೀಪ್ ಅವರು ಹೇಳಿರುವುದು ಸರಿಯಾಗಿದೆ. ಇದನ್ನು ಎಲ್ಲರು ಮನಗಣಿಸಬೇಕು, ಮತ್ತು ಗೌರವ ಕೊಡಬೇಕು ಎಂದಿದ್ದಾರೆ.
ಭಾರತ ದೇಶ ಅಂದ್ರೆ ಎಲ್ಲಾ ಧರ್ಮೀಯರು, ಎಲ್ಲ ಭಾಷಿಗರನ್ನು ಒಗ್ಗೂಡಿಸುವಮನತದ್ದು ಭಾರತ. ಬೇರೆ ಬೇರೆ ಕಡೆ ನೋಡಿದ್ದೀವಿ. ಯಾವ ರೀತಿ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮತ್ತೊಂದು ಆಗಿರುವುದನ್ನು. ಆದರಿಂದ ನಮ್ಮ ದೇಶದಲ್ಲಿ ಇರುವ ಶಾಂತಿ ಸುವ್ಯವಸ್ಥೆಯನ್ನು ಎಲ್ಲರನ್ನು ಹಾಗೆಯೇ ನಡೆಸಿಕೊಂಡು ಹೋದರೆ ಸಾಕು. ಇನ್ನೊಬ್ಬರು ಯಾರಿಗೂ ಅಡ್ವೈಸ್ ಮಾಡು ಹಾಗಿಲ್ಲ. ಅವರವರ ಕರ್ತವ್ಯವನ್ನು ಅವರವರು ಮಾಡುವುದು ಮುಖ್ಯ ಎಂದಿದ್ದಾರೆ.
ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ನಾನು ರಾತ್ರಿ ಹೋಗುತ್ತಿದ್ದೇನೆ. 30 ರಂದು ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇನೆ. ಕೊವಿಡ್ 4ನೇ ಅಲೆ ಅಂತ ಏನು ಬಂದಿಲ್ಲ. 9ರಿಂದ ಕೊಂಚ ಹೆಚ್ಚಾಗಿದೆ. ಎಲ್ಲವನ್ನು ಗಮನಿಸುತ್ತಾ ಇದ್ದೀವಿ. ಅದಕ್ಕೆ ಬೇಕಾದ ಮುಂಜಾಗ್ರತೆಯನ್ನು ತೆಗೆದುಕೊಳ್ಳುತ್ತಿದ್ದೇವೆ. ಯೂರೋಪ್ ಮತ್ತು ಹಲ ದೇಶಗಳಲ್ಲಿ ಯಾರು ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ ಅಲ್ಲಿ ಹೆಚ್ಚಾಗಿದೆ ಎಂದಿದ್ದಾರೆ.