ಬೆಳಗಾವಿ: ಅನೇಕ ವರ್ಷಗಳಿಂದಲೂ ಬೆಳಗಾವಿ ವಿಭಜನೆ ವಿಚಾರ ಜೋರು ಚರ್ಚೆಯಲ್ಲಿದೆ. ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೂ ಪ್ರಯಾಣ ಬೆಳೆಸುತ್ತಿದ್ದಾರೆ. ಇದೇ ಬೆನ್ನಲ್ಲೇ ಬೆಳಗಾವಿ ವಿಭಜನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬೆಳಗಾವಿ ವಿಭಜನೆ ವಿಚಾರ ಚರ್ಚೆಯಲ್ಲಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ. ಎರಡ್ಮೂರು ಜಿಲ್ಲೆಗಳ ಬಗ್ಗೆ ಪ್ರಸ್ತಾಪ ಇದೆ. ಜನ ಈಗ ಮತ್ತೆ ವಿಭಜನೆ ಬಗ್ಗೆ ಹೇಳುತ್ತಿದ್ದಾರೆ. ಕರ್ನಾಟಕ ಮತ್ತು ಬೆಳಗಾವಿ ಜಿಲ್ಲೆ ಹಿತ ದೃಷ್ಟಿಯಿಂದ ಯೋಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾಳೆ ದೆಹಲಿ ಹೋಗುತ್ತಿದ್ದೇನೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ.
ರಾಜ್ಯದಲ್ಲಿ ಸಂಪುಟ ವಿಸ್ತರಣೆಯೂ ಇನ್ನು ಆಗಿಲ್ಲ. ಈ ಬಗ್ಗೆ ಚರ್ಚಿಸಲೂ ಹೈಕಮಾಂಡ್ ಯಾವಾಗ ಕರೆಯುತ್ತದೆಯೋ ಆಗ ಹೋಗುತ್ತೇನೆ. ಈ ಬಗ್ಗೆಯೂ ಚರ್ಚಿಸುತ್ತೇನೆ. ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಜನರಿಗೆ ಭವಸೆ ನೀಡಿದ್ದಾರೆ.