ಬೆಳಗಾವಿ: ಎಂಇಎಸ್ ಪುಂಡರ ಪುಂಡಾಟಿಕೆಗೆ ಕನ್ನಡಿಗರಲ್ಲಿ ಆಕ್ರೋಶ ಹೆಚ್ಚಾಗಿದೆ. ಎಂಇಎಸ್ ಪುಂಡರು ಕಡಿಮೆ ಅವಾಂತರವೇನು ಮಾಡಿಲ್ಲ. ಕನ್ನಡಿಗರನ್ನು ಗುರಿಯಾಗಿಸಿಕೊಂಡು ಮಾಡಿರುವ ಹಿಂಸಾಚಾರ ಜೊತೆಗೆ ರಾಯಣ್ಣ ಅವರ ಪ್ರತಿಮೆಯನ್ನ ಧ್ವಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ, ರಾಜಕೀಯ ಗಣ್ಯರು ಅವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ಎಂಇಎಸ್ ಪುಂಡರ ಬಗ್ಗೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಸಿದ್ಧವಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಲು ಬಿಡೋದಿಲ್ಲ ಎಂದಿದ್ದಾರೆ. ಕೆಲವೇ ಕೆಲವು ಪುಂಡರು ರಾತ್ರಿ ಬಂದು ಪುಂಡಾಟ ನಡೆಸಿದ್ದಾರೆ. ರಾತ್ರಿ ಬಂದು ಗಲಾಟೆ ನಡೆಸಿದ್ದು ಪುರುಷಾರ್ಥನ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಈ ದುಷ್ಟ ಶಕ್ತಿಗಳಿಗೆ ಬುದ್ಧಿ ಕಲಿಸುವ ಕಾಲ ಸನ್ನಿಹಿತವಾಗಿದೆ. ಇದಕ್ಕೆಲ್ಲಾ ಕನ್ನಡಿಗರು ಹೆದರಲ್ಲ ಎಂದಿದ್ದಾರೆ.