ಬೆಂಗಳೂರು: ಹಿಜಾಬ್ ವಿವಾದ ಕುರಿತು ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ. ಸಮವಸ್ತ್ರ ಮಾತ್ರ ಧರಿಸಬೇಕು ಎಂಬ ತೀರ್ಪು ನೀಡಿದೆ.
ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸಮವಸ್ತ್ರವನ್ನ ಎತ್ತಿ ಹಿಡಿಯಲಾಗಿದೆ. ಏನಾದರೂ ಇರಲಿ ಇದು ಮಕ್ಕಳ ಭವಿಷ್ಯದ ಪ್ರಶ್ನೆ, ಮಕ್ಕಳ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಕ್ಕಿಂತ ಮುಖ್ಯ ಬೇರೆ ಯಾವುದು ಇಲ್ಲ. ಹೈಕೋರ್ಟ್ ಏನು ತೀರ್ಪು ಕೊಟ್ಟಿದೆ ಅದನ್ನ ನಾವೆಲ್ಲ ಪಾಲಿಸಬೇಕು.
ಈ ತೀರ್ಪನ್ನ ಅನುಷ್ಠಾನಗೊಳಿಸುವಾಗ ಎಲ್ಲರು ಶಾಂತಿ ಕಾಪಾಡಬೇಕು. ಸಪೋರ್ಟ್ ಮಾಡಬೇಕು. ಸಮಸ್ತ ಜನತೆಗೆ, ಸಮುದಾಯದ ನಾಯಕರಿಗೆ, ಪಾಲಕರಿಗೆ, ಶಿಕ್ಷರಿಕಗೆ, ಮುಖಂಡರಿಗೆ ನಾನು ಮನವಿ ಮಾಡುತ್ತೇನೆ. ಈ ತೀರ್ಪಿನ ನಂತರ ಒಪ್ಪಿಕೊಂಡು ಶಾಂತಿ ಸುವ್ಯವಸ್ಥಿತೆ ಕಾಪಾಡಬೇಕು ಎಂದು ಹೇಳಿದ್ದಾರೆ.