ಕಲಬುರಗಿ: ಪಿಎಸ್ಐ ನೇಮಕಾತಿಯ ಬಗ್ಗೆ ದೂರು ಬಂದ ಕೂಡಲೇ ಪ್ರಾಥಮಿಕವಾಗಿ ಕೂಲಂಕುಶವಾಗಿ ತನಿಖೆ ನಡೆಸಲು ಸೂಚನೆ ಕೊಡಲಾಗಿದೆ. ಅದರಲ್ಲಿ ಕೆಲವು ಉತ್ತರ ಪತ್ರಿಕೆಯಲ್ಲಿ ವ್ಯತ್ಯಾಸ ಕಂಡ ಕೂಡಲೆ ಸಿಐಡಿಗೆ ವಹಿಸಲಾಗಿದೆ. ಸಮಯವನ್ನು ಹಾಳು ಮಾಡಬಾರದು, ತಾರತಮ್ಯ ಮಾಡದೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಹಲವು ತಂಡಗಳ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವತ್ತಿನ ಬೆಳವಣಿಗೆ ಪ್ರಕಾರ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ. ಇನ್ನಷ್ಟು ಹೆಚ್ಚು ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಯಾರೇ ಇರಲಿ, ಪ್ರಶ್ನೆ ಅದಲ್ಲ. ಇದರಲ್ಲಿ ಯಾರೇ ಇನ್ವಾಲ್ ಆಗಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ನಾವೂ ಯಾವುದನ್ನು ಮುಚ್ಚಿಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೆ ನಮ್ಮ ಸರ್ಕಾರ. ನಾವೇ ಸಿಐಡಿ ತನಿಖೆ ಮಾಡಿದ್ದು. ಈ ಸಂಸ್ಥೆ ಅಂತಲ್ಲ ಯಾವುದೇ ಸಂಸ್ಥೆಯಲ್ಲಿ ಈ ಪ್ರಕಾರ ನಡೆದರೂ ಮುಕ್ತವಾಗಿ ತನಿಖೆ ನಡೆಸುವಂತ ಅನುಮತಿ ನೀಡಲಾಗಿದೆ.
ಬೇರೆ ಪಕ್ಷದವರು ಯಾವ ರೀತಿ ಮುಚ್ಚಾಕಿದ್ದಾರೆ ಅನ್ನೋದು ಗೊತ್ತಿದೆ. ಇದೇ ಪಿಎಸ್ಐ ನೇಮಕಾತಿಯಲ್ಲಿ ಎರಡ್ ಮೂರ್ ನಾಲ್ಕು ಸಲ ಪರೀಕ್ಷೆ ನಡೆದಿರುವ ಇತಿಹಾಸ ನೋಡಿದ್ದೇವೆ. ಉತ್ತೀರ್ಣರಾಗಿರುವವರ ವಿಚಾರಣೆ ನಡೆಯುತ್ತಿದೆ. ಆ ವರದಿಯನ್ನು ಕೇಳಿದ್ದೇನೆ. ವರದಿ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.