ದಸರಾ ಉದ್ಘಾಟಕರಾಗಿ ನೇಮಕ : ಎಸ್ ಎಂ ಕೃಷ್ಣ ಅವರ ಮಾತು ಕೇಳಿ ಹಲವರು ಶಾಕ್..!

suddionenews
1 Min Read

ಬೆಂಗಳೂರು: ಈ ಬಾರಿಯ ದಸರಾ ಕೂಡ ಅದ್ದೂರಿಯಾಗಿ ನಡೆಯುತ್ತಿಲ್ಲ. ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿದೆ. ಅರಮನೆ ಆವರಣಕ್ಕಷ್ಟೇ ಈ ಬಾರಿಯ ದಸರಾ ಕೂಡ ಸೀಮಿತವಾಗಿದೆ. ಸಾರ್ವಜನಿಕರಿಗೆ ಅವಕಾಶವಿಲ್ಲ. ಸರಳ ದಸರಾವನ್ನ ಈ ಬಾರಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಉದ್ಘಾಟನೆ ಮಾಡಲಿದ್ದಾರೆ.

ಈ ಬಗ್ಗೆ ಈಗಾಗ್ಲೇ ಸಿಎಂ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಎಸ್ ಎಂ ಕೃಷ್ಣ ಅವರು, ಮೈಸೂರು ಬಹಳ ಅಭಿವೃದ್ಧಿ ಪಥದಲ್ಲಿ ಇರುವ ಪಟ್ಟಣ. ದಸರಾಗೆ ಆಹ್ವಾನಿಸಿರುವುದು ತುಂಬಾ ಖುಷಿಯ ವಿಚಾರ.

ಆದ್ರೆ ಸರ್ಕಾರ ನನ್ನ ಯೋಗ್ಯತೆ ಮೀರಿ ಜವಬ್ದಾರಿಯನ್ನ ಕೊಟ್ಟಿದೆ. ಇಂಥ ಸುಯೋಗ ಒದಗಿಸಿಕೊಟ್ಟ ಸಿಎಂ ಹಾಗೂ ಕ್ಯಾಬಿನೆಟ್ ಮಂತ್ರಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *