31ನೇ ಜಿಲ್ಲೆಯ ಉದ್ಘಾಟನೆ ಹೇಗಿತ್ತು ಗೊತ್ತಾ..?

suddionenews
0 Min Read

ವಿಜಯನಗರ: ಬಳ್ಳಾರಿಗೆ ಹೊಂದಿಕೊಂಡಿದ್ದ ವಿಜಯನಗರ ಇದೀಗ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿದೆ. ಇಂದು ಅಧಿಕೃತವಾಗಿ ವಿಜನಗರವನ್ನ ಉದ್ಘಾಟನೆ ಮಾಡಲಾಗಿದೆ. ವಿಜಯನಗರ ಜಿಲ್ಲೆಗೆ ಆರು ತಾಲೂಕುಗಳು ಸೇರ್ಪಡೆಯಾಗಿವೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದ್ದಾರೆ. ಜೊಸಪೇಟೆಯ ಜಿಲ್ಲಾ ಕ್ರೀಡಾಂಹಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಜಯನಗರವನ್ನ ಅಧಿಕೃತವಾಗಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ.

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯೆಂದು ಘೋಷಣೆ ಮಾಡಬೇಕೆಂಬ ಬಯಕೆ ಇಂದು ನಿನ್ನೆಯದಲ್ಲ. ಸಾಕಷ್ಟು ವರ್ಷಗಳಿಂದ ಈ ಕೂಗು ಕೇಳಿ ಬರ್ತಾ ಇತ್ತು. ಇಂದು ಅಧಿಕೃತವಾಗಿ ಇದಕ್ಕೆ ಚಾಲನೆ ಸಿಕ್ಕಿದೆ. ಅದ್ದೂರಿ ವೇದಿಕೆಯಲ್ಲಿ ಸಿಎಂ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *