ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ಜನಜೀವನ ಅಸ್ತವ್ಯಸ್ತವಾಗಿ ಬಿಡುತ್ತೆ. ಇನ್ನು ರಾತ್ರಿಯಿಡಿ ಸುರಿದರೆ ಅದರ ಪರಿಣಾಮ ಏನಾಗಬೇಡ. ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ನೀರಿನಿಂದ ತುಂಬಿ ತುಳುಕಿದೆ.
ಮಳೆಯಿಂದಾದ ಪರಿಣಾಮದ ಬಗ್ಗೆ ಕ್ರಮ ತೆಗೆದುಕೊಳ್ಳಲು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ದಿಢೀರನೇ ಸಭೆ ನಡೆದಿದೆ. ಆ ಸಭೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.
ಬಿಬಿಎಂಪಿ ಕಮೀಷನರ್ ಗೆ ಇದರ ಸಂಪೂರ್ಣ ಜವಬ್ದಾರಿ ಯನ್ನು ನೀಡಿದ್ದಾರೆ. ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಳೆಯಿಂದಾಗಿ ಭಾರೀ ಅನಾಹುತ ಸಂಭವಿಸಿದೆ. ಕಟ್ಟಡಗಳು, ತಡೆಗೋಡೆಗಳು ಕುಸಿದಿದೆ. ಅಷ್ಟೇ ಅಲ್ಲ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಅಪಾಯದಲ್ಲಿ ಸಿಲುಕಿದವರ ರಕ್ಷಣೆಗೆ ಹೋಂ ಗಾರ್ಡ್ ಬಳಸುತ್ತಿದ್ದೇವೆ. ಕೂಡಲೇ ಕ್ರಮ ತೆಗೆದುಕೊಂಡು ವರದಿ ನೀಡಲು ಸೂಚಿಸಿದ್ದೇನೆ ಎಂದಿದ್ದಾರೆ.