ದೆಹಲಿಗೆ ಹೊರಟ ಸಿಎಂ : ಆಕಾಂಕ್ಷಿಗಳಿಗೆ ಈ ಬಾರಿಯಾದರು ಸಿಗುತ್ತಾ ಸಚಿವ ಸ್ಥಾನ..?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಪುನರ್ ರಚನೆಯ ಬಗ್ಗೆ ಚರ್ಚೆ ನಡೆಯುತ್ತಲೆ ಇದೆ. ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಆದಷ್ಟು ಬೇಗ ಪುನರ್ ರಚನೆ ಮಾಡಿದರೆ ಒಂದಷ್ಟು ಸಮಯ ಸಚಿವರಾಗಿ ಅಧಿಕಾರ ನಡೆಸಬಹುದು ಎಂಬುದು ಹಲವರ ಆಸೆ, ಆಕಾಂಕ್ಷೆ. ಆದರೆ ಹೈಕಮಾಂಡ್ ಇದಕ್ಕೆ ಅಸ್ತು ಎನ್ನುತ್ತಿಲ್ಲವಲ್ಲ ಎಂಬ ಬೇಸರವೂ ಕಾಡುತ್ತಿದೆ.

ಇದರ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ದೆಹಲಿಗೆ ಹೊರಟಿರುವುದು ಆಕಾಂಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ದೆಹಲಿಯ ವಿಮಾನ ಹಿಡಿದು ಹೊರಟಿದ್ದಾರೆ. ಇಂದು ರಾತ್ರಿ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.

ಜಾಗತಿಕ ಬಂಡವಾಳ ಹೂಡಿಕೆದಾರ ರಾಷ್ಟ್ರಗಳ ರಾಯಭಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ಸಿಎಂ ಬೊಮ್ಮಾಯಿ ಅವರು ಪಾಲ್ಗೊಳ್ಳಿದ್ದಾರೆ. ಬಳಿಕ ಹೈಕಮಾಂಡ್ ಭೇಟಿ ಮಾಡಿ ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಇನ್ನು ಇದೇ ವೇಳೆ ಹೈಕಮಾಂಡ್ ಜೊತೆ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿ, ಸಂತಸದ ಸುದ್ದಿ ಹೊತ್ತು ಬರಬಹುದು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *