Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಂದ್ರವಳ್ಳಿಯಲ್ಲಿ ನಗರಸಭೆಯಿಂದ ಸ್ವಚ್ಛತಾ ಕಾರ್ಯ

---Advertisement---

 

ಚಿತ್ರದುರ್ಗ. ಸೆ.26 : ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ‘ಏಕ್ ದಿನ್ ಏಕ್ ಸಾತ್ ಏಕ್ ಘಂಟಾ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಚಿತ್ರದುರ್ಗ ನಗರಸಭೆ ವತಿಯಿಂದ ಗುರುವಾರ ಐತಿಹಾಸಿಕ ಚಂದ್ರವಳ್ಳಿ ಸೇರಿದಂತೆ ನಗರದ ವಿವಿಧಡೆ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಮುಂಜಾನೆ ಚಂದ್ರವಳ್ಳಿಯಲ್ಲಿ ವಾಯುವಿಹಾರಿಗಳೊಂದಿಗೆ ನಗರ ಸಭೆ ಅಧ್ಯಕ್ಷೆ ಅನಿತಾ ರಮೇಶ್, ಸದಸ್ಯರಾದ ಶಶಿಧರ್, ನಗರ ಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಾಫರ್ ಸೇರಿದಂತೆ ನಗರ ಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು.

ರಂಗಯ್ಯನಬಾಗಿಲು ಬಳಿ ಹಾಗೂ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ದೇವಸ್ಥನಾದ ಬಳಿ ನಗರ ಸಭೆ ಸಿಬ್ಬಂದಿ ಸ್ವಚ್ಛತೆ ಕಾರ್ಯಕೈಗೊಂಡು ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ವೇಳೆ ಆರೋಗ್ಯ ನಿರೀಕ್ಷರಾದ ಬಾಬು ರೆಡ್ಡಿ, ನಿರ್ಮಿಲ.ಹೆಚ್.ಆರ್, ರುಕ್ಮಿಣಿ, ಭಾರತಿ.ಕೆ. ಹೀನಾ ಕೌಸರ್, ಜಯಪ್ರಕಾಶ್ ಸೇರಿದಂತೆ ಪೌರ ಕಾರ್ಮಿಕರು, ಸಮುದಾಯ ಪ್ರೇರಕರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...