ರಾಮನಗರ: ಜನಪ್ರತಿನಿಧಿಗಳು ಅಂದ್ರೆ ಹೇಗಿರಬೇಕು..? ಆದ್ರೆ ಅದಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ ಇಂದು. ಜಿಲ್ಲೆಯಲ್ಲಿ ಸಚುವ ಅಶ್ವಥ್ ನಾರಾಯಣ್ ಹಾಗೂ ಸಂಸದ ಡಿ ಕೆ ಸುರೇಶ್ ಅವರ ಬೆಂಬಲಿಗರ ಕಿತ್ತಾಟ, ತಾರಕಕ್ಕೇರಿ, ವೇದಿಕೆ ಮೇಲೆಯೇ ಪುಂಡರಂತೆ ವರ್ತಿಸಿದ್ದಾರೆ.
ಇಂದು ಅಂಬೆಲೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಿಎಂ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಾಣ್, ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿ ಮಾಲಾರ್ಪಣೆ ಮಾಡಿದ್ರು. ಈ ವೇಳೆ ಸಂಸದ ಡಿ ಕೆ ಸುರೇಶ್ ಅವರ ಹೆಸರು ಇಲ್ಲ ಎಂದು ಆಕ್ರೋಶಗೊಂಡ ಬೆಂಬಲಿಗರು ಗಲಾಟೆ ಮಾಡಲು ಶುರು ಮಾಡಿದ್ರು.
ಆಯೋಜಕರು ಹೆಸರು ಮರೆತರೋ ಏನೋ, ಅಲ್ಲೆ ಇದ್ದ ಬೆಂಬಗಲಿಗರು ಡಿ ಕೆ ಶಿವಕುಮಾರ್ ಹಾಗೂ ಡಿ ಕೆ ಸುರೇಶ್ ಎಂದು ಘೋಷಣೆ ಕೂಗೋದಕ್ಕೆ ಶುರು ಮಾಡಿದ್ರು. ಕಪ್ಪು ಬಟ್ಟೆ ಕೂಡ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ಟೇಜ್ ಮೇಲೆ ಸಿಎಂ ಬರುತ್ತಿದ್ದಂತೆ ಸ್ಟೇಜ್ ಹೇರಿ ಅಲ್ಲಿಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಸ್ಟೇಜ್ ಮೇಲೆ ಒಂದು ರೀತಿಯ ಗಲಾಟೆ ಯನ್ನೇ ನಿರ್ಮಿಸಿತ್ತು.