ಚಿತ್ರದುರ್ಗ: ಇತ್ತಿಚೆಗೆ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಭರ್ಜರಿ ಭೇಟೆಯನ್ನೇ ಆಡಿದ್ದರು. ಕಾಂಟ್ರಾಕ್ಟರ್ ಮನೆಗೆ ಏಕಾಏಕಿ ದಾಳಿ ನಡೆಸಿದ ಅಧಿಕಾರಿಗಳಿಗೆ ಸಿಕ್ಕಿದ್ದು ಬರೋಬ್ಬರಿ 42 ಕೋಟಿ. ಅದು ಮಂಚದ ಕೆಳಗೆ. ಬಳಿಕ ಸಾಕಷ್ಟು ತನಿಖೆ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದೇ ಸಿಟಿ ರವಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆಲವರ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ರಾಜೀವ್ ತಾರನಾಥ್ ಅವರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಪರ್ಸೆಂಟೆಜ್ ಲೆಕ್ಕದಲ್ಲಿ ಕಲಾವಿದ ಬಳಿ ಹಣ ಕೇಳಿದ ಕುಖ್ಯಾತಿ ಸರ್ಕಾರದ್ದು. ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ, ತಂಗಡಗಿ. ಇದ್ದವರು ಮೂವರು, ಕದ್ದವರು ಯಾರು..? ಅಂಬಿಕಾಪತಿ ಇವರಿಗೆ ದೂರದವರಲ್ಲ, ಐಟಿ ದಾಳಿ ಕುರಿತು DK ಶಿವಕುಮಾರ್ ಪರೋಕ್ಷವಾಗಿ ಒಪ್ಪಿದ್ದಾರೆ ಎಂದಿದ್ದಾರೆ.
ಈ ಹಣವನ್ನು ಪಂಚರಾಜ್ಯಗಳ ಎಲೆಕ್ಷನ್ ಗೆ ಸರ್ಕಾರ ಸಂಗ್ರಹಿಸಿದೆ. ಕೆಲವು ಭಾಗದಲ್ಲಿ ಹೆದರಿಸಿ, ಬೆದರಿಸಿ ಹಣ ಸಂಗ್ರಹಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇವರಿಬ್ಬರು ಪ್ರಾಮಾಣಿಕರು ಆಗಿದ್ದರೇ ಹಣದ ಪ್ರಕರಣವನ್ನು CBI ತನಿಖೆಗೆ ನೀಡಲಿ ಎಂದು ಒತ್ತಾಯಿಸಿದರು.
ಇದೇ ವೇಳೆ ವಿದ್ಯುತ್ ಕಡಿತದ ಬಗ್ಗೆ ಮಾತನಾಡಿ, ಅಕ್ಟೋಬರ್ ತಿಂಗಳು ವಿದ್ಯುತ್ ಸಮಸ್ಯೆ ಕಾಡುತ್ತಿದ್ದು,
ಬರದ ಬೇಗೆಯಲ್ಲಿ ವಿದ್ಯುತ್ ಕಟ್ ಮಾಡಿ ರೈತರಿಗೆ ಬರೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಏಪ್ರಿಲ್, ಮೇ ತಿಂಗಳಲ್ಲಿ ಯಾವ ಮಟ್ಟಕ್ಕೆ ಹೋಗಬಹುದು. ಗೃಹ ಜ್ಯೋತಿ ಕೊಟ್ಟಿದ್ದಾರೆ, ಮುಂದೆ ಕಂರೆಂಟ್ ಇಲ್ಲ ಉಚಿತ ಎಂದು ಹೇಳುತ್ತಾರೆ ಎಂದರು.
ಧರ್ಮದ ಆಧಾರದ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂದಿರುವ ಸಚಿವ ಈಶ್ವರ್ ಖಂಡ್ರೇ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ ತಡವಾಗಿ ಆದರೂ ಖಂಡ್ರೆ ಸತ್ಯ ಹೇಳಿದ್ದಾರೆ. ಇಸ್ಲಾಂ ಹೆಸರಲ್ಲಿ ಭಯೋತ್ಪಾದನೆ ನಡೆಯುತ್ತಿದ್ದು, ಸತ್ಯ ಹೇಳುವ ದೈರ್ಯ ಇತ್ತೀಚೆಗೆ ಕಳೆದುಕೊಂಡಿದ್ದಾರೆ. ನಮಗೆ ಎಲ್ಲಾ ಮಾಹಿತಿ ಲಭ್ಯ ಆಗಿರುವುದು ಕಾಂಗ್ರೆಸ್ ವಲಯದಿಂದ ಎಂದು ಹೇಳಿದರು.