ಸಿಟಿ ರವಿ ಕೋರ್ಟ್ ಗೆ ಹಾಜರು: ಯಾರ್ಯಾರ ಮೇಲೆ ಏನೇನು ಆರೋಪ ಮಾಡಿದರು..?

suddionenews
1 Min Read

 

 

ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಸಹ್ಯ ಪದ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಟಿ ರವಿ ಅವರನ್ನು ಪೊಲೀಸರು 5ನೇ ಜೆಎಂಎಫಿ ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶೆ ಡಿಸೋಜಾ ಅವರು ಪ್ರಕರಣ ವುಚಾರಣೆಯನ್ನು ನಡೆಸಿದರು. ಇದೇ ವೇಳೆ ಸಿಟಿ ರವಿ ಅವರು ಜಾಮೀನಿಗೆ ವಕಾಲತು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ನ್ಯಾಯಧೀಶೆ ಅವರು ಸಿಟಿ ರವಿ ಅವರತ್ತ ನೋಡಿ ಯಾವಾಗ ಬಂಧಿಸಿದರು ಎಂದು ಕೇಳಿದಾಗ, ಉತ್ತರಿಸಿದ ಸಿಟಿ ರವಿ ಅವರು ಸುವರ್ಣ ಸೌಧದಲ್ಲಿ ನಿನ್ನ ಸಂಜೆ 6.30ರಿಂದ 6.45ರ ಸುಮಾರುಗೆ ಬಂಧಿಸಿದ್ದಾರೆ. ಬಂಧನದ ನಂತರ ರಾತ್ರಿ ಹತ್ತು ಗಂಟೆಯವರೆಗೆ ನನ್ನನ್ನು ವಾಹನದಲ್ಲಿ ಸುತ್ತಿಸಿದ್ದಾರೆ. ಧಾರವಾಡ, ರಾಮದುರ್ಗ ಸೇರಿದಂತೆ ಹಲವೆಡೆ ನನ್ನನ್ನು ಸುತ್ತಾಡಿಸಿದರು. ಕ್ರಷರ್, ಕಬ್ಬಿನ ಗದ್ದೆಯಲ್ಲೂ ನನ್ನನ್ನು ಸುತ್ತಾಡಿಸಿದ್ದಾರೆ. ಹೀರೇಬಾಗಿವಾಡಿಯಿಂದ ಯಾದವಾಡ, ಮುದ್ದೋಳ ಎಂಬ ಬೋರ್ಡ್ ನೋಡಿದ್ದೇನೆ. ಯಾದಗಡ್ ಎಲ್ಲಾ ಕಡೆ ಕರೆದುಕೊಂಡು ಹೋಗಿದ್ದಾರೆ.

ಖಾನಾಪುರದಲ್ಲಿ ಪೊಲೀಸರು ತಲೆಗೆ ಹೊಡೆದ್ರು. ಅವರು ಯಾರೂ ಎಂದು ನಮಗೆ ಗೊತ್ತಾಗಲಿಲ್ಲ. ಬೆಳಗಿನ ಜಾವ 3.15 ಗಂಟೆಗೆ ಚಿಕಿತ್ಸೆ ಕೊಡಿಸಿದ್ದಾರೆ‌. ನನಗೆ ಪೊಲೀಸರು ಮಾನಸಿಕವಾಗಿ ಹಿಂಸೆ ನೀಡಿದ್ದು, ಅಲ್ಲದೆ ವಾಚ್ ಕಿತ್ತುಕೊಂಡಿದ್ದಾರೆ. ನನಗೆ ಭಯ ಹುಟ್ಟಿಸುವಂತೆ ನಡೆದುಕೊಳ್ಳುತ್ತಿದ್ದರು. ಪ್ರತಿ ಹತ್ತು ನಿಮಿಷಕ್ಕೆ ಒಂದು ಫೋನ್ ಬರುತ್ತಿತ್ತು. ಅವರ ಡೈರೆಕ್ಷನ್ ಆಧಾರದ ಮೇಲೆ ನನ್ನನ್ನ ಸುತ್ತಾಡಿಸುತ್ತಿದ್ದರು. ರಾತ್ರಿ ಇಡೀ ಉಪವಾಸ ಇದ್ದೇನೆ. ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಮಂತ್ರಿ ಹೇಳಿದ್ದರು. ರಾತ್ತಿ ನನ್ನನ್ನು ಪೊಲೀಸರು ಎಲ್ಲೆಲ್ಲೋ ಕರೆದೊಯ್ಯುತ್ತಿದ್ದರು. ದೇವರ ಮೇಲೆ ಭಾರ ಹಾಕಿ ನಾನು ಹೋದೆ ಎಂದು ಸಾಲು ಸಾಲು ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *