ನವೆಂಬರ್ 30 ರಂದು ಸಿಟಿ ಇನ್ಸ್ಟಿಟ್ಯೂಟ್ ಚುನಾವಣೆ : ನ್ಯಾಯವಾದಿ ವಿಶ್ವನಾಥ್ ನಾಮಪತ್ರ ಸಲ್ಲಿಕೆ

0 Min Read

 

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಸಿಟಿ ಇನ್ಸ್‌ಟಿಟ್ಯೂಟ್ ನ ವ್ಯವಸ್ಥಾಪನಾ ಸಮಿತಿಗೆ ನಡೆಯುವ ಚುನಾವಣೆಯಲ್ಲಿ ಖಜಾಂಚಿ ಸ್ಥಾನಕ್ಕೆ ನ್ಯಾಯವಾದಿ ವಿಶ್ವನಾಥ್ ಎನ್.ಬಿ. ಇವರು ಸಿಟಿ ಇನ್ಸ್‍ಟಿಟ್ಯೂಟ್‍ನಲ್ಲಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಈ ಹಿಂದೆಯೂ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿ ಜಯಶಾಲಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ವಿಶ್ವನಾಥ್ ಎನ್.ಬಿ.ರವರು ಈ ಬಾರಿಯೂ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನ.30 ರಂದು ಚುನಾವಣೆ ನಡೆಯಲಿದ್ದು, 19 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು.

 

Share This Article
Leave a Comment

Leave a Reply

Your email address will not be published. Required fields are marked *