ರಾಜ್ಯ ಸರ್ಕಾರದ ಬಗ್ಗೆ ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ..!

suddionenews
1 Min Read

ಯಾದಗಿರಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಮನಸ್ತಾಪಗಳು ಆಗಾಗ ಜಗಜ್ಜಾಹೀರಾಗುತ್ತಿರುತ್ತವೆ. ಸಚಿವ ಸ್ಥಾನ, ಸಿಎಂ ಹುದ್ದೆ, ಡಿಸಿಎಂ ಹೆಚ್ಚಳ ಹೀಗೆ ಒಂದ ಎರಡಾ ಹಲವು ವಿಚಾರಗಳು ಆಗಾಗ ಬಂದು ಹೋಗುತ್ತಿವೆ. ಇದೀಗ ಇದೇ ವಿಚಾರವಾಗಿ ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ ನುಡಿದಿದ್ದಾರೆ.

ದೀಪಾವಳಿಯ ನರಕ ಚತುರ್ದಶಿಯಂದು ಯಾದಗಿರಿಯ ಕೊಡೇಕಲ್ ಬಸವಣ್ಣನವರ ಭವಿಷ್ಯ ಹೊರಬಿದ್ದಿದೆ. ಪಕ್ಷದಲ್ಲಿನ ಗೊಂದಲ ಸರಿಪಡಿಸಿಕೊಳ್ಳದೆ ಇದ್ದರೆ ಸರ್ಕಾರ ಕಂಟಕ ಎದುರಾಗಲಿದೆ. ಎಲ್ಲರೂ ವಿಶ್ವಾಸದಿಂದ ಹೋಗದೆ ಇದ್ದರೆ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಹಕವು ಮನಸ್ಥಿತಿಗಳು ಸೇರಿ ಅಧಿಕಾರ ಪಡೆಯಲು ಯತ್ನಿಸಿದೆ. ಹಲವರು ಸೇರಿ ಅಧಿಕಾರ ಪಡೆಯಲು ಯೋಚಿಸಿರುವವರು ಕೂಡ ಯೋಚಿಸಿ, ಮುಂದಕ್ಕೆ ಹೆಜ್ಜೆ ಇಡಬೇಕು. ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾರನ್ನೂ ನಂಬದಂತಹ ದಿನಮಾನಗಳು ನಡೆಯುತ್ತವೆ ಎಂದು ದೀಪಾವಳಿಯಂದು ಎಚ್ಚರಿಕೆಯ ಭವಿಷ್ಯ ನೀಡಿದೆ.

ರಾಜ್ಯದಲ್ಲಿ ಒಂದೆರಡು ಬೆಳವಣಿಗೆಗಳು ನಡೆಯುತ್ತಿಲ್ಲ. ಈ ಕಡೆ ಆಡಳಿತ ಪಕ್ಷದಲ್ಲಿಯೇ ಬಣ ರಾಜಕೀಯ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಂಬಲಿಗರು ನಮ್ಮ ನಾಯಕ ಸಿಎಂ ಆಗಬೇಕು ಅಂತ ಹೇಳಿಕೆಗಳನ್ನು ಕೊಡುತ್ತಾರೆ. ಇದರ ನಡುವೆ ವಿರೋಧ ಪಕ್ಷದ ಹೇಳಿಕೆಗಳು ಸಹ ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ. ಆಪರೇಷನ್ ಕಮಲದ ಆರೋಪದ ನಡುವೆ, ಹೆಚ್ಚು ದಿನ ಈ ಸರ್ಕಾರ ಆಡಳಿತದಲ್ಲಿ ಇರೋದಿಲ್ಲ ಎಂದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತಿಚೆಗೆ ಕುಮಾರಸ್ವಾಮಿ ಅವರು ಕೂಡ, ಬಿಜೆಪಿ ಜೊತೆಗೆ 54 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ವಿಷಯ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ಈಗ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *