ಚಿತ್ರಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ |  ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ವಶ

ಸುದ್ದಿಒನ್, ಚಿತ್ರದುರ್ಗ, ನವೆಂಬರ್.11 :  ಚಿತ್ರಹಳ್ಳಿ ಪೊಲೀಸರಿಂದ ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅನ್ನು ಬಂಧಿಸಿ ಅವರಿಂದ ಅಪಾರ ಮೌಲ್ಯದ ಶ್ರೀಗಂಧ,  ರಕ್ತ ಚಂದನ, 400 ಗ್ರಾಂ

ತೂಕದ 2 ಆನೆ ದಂತಗಳು, ಪೆಂಗೋಲಿನ್ ಚಿಪ್ಪುಗಳು ಮತ್ತು ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳು, 9ಮೊಬೈಲ್ ಗಳು ಮತ್ತುಇತರೆ ಆಯುಧಗಳನ್ನು
ವಶಪಡಿಸಿಕೊಳ್ಳಲಾಗಿದೆ.

ತರೀಕೆರೆಯ ವಿ.ಚಂದ್ರಶೇಖರ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಖಲೀಲ್, ಹೊಸದುರ್ಗದ ಪ್ರಶಾಂತ ಮತ್ತು ರಂಗಸ್ವಾಮಿ, ಚಿಕ್ಕಮಗಳೂರಿನ ಪುನಿತ್‍ನಾಯ್ಕ ಮತ್ತು ರಾಮನಾಯ್ಕ ಬಂಧಿತರು.

ಹೊಳಲ್ಕೆರೆ ತಾಲ್ಲೂಕು ಕೆರೆಯಾಗಳಹಳ್ಳಿ ಗ್ರಾಮದ ದಿನೇಶ.ಕೆ.ಸಿ. ಅವರ ಜಮೀನಿನಲ್ಲಿ  ಕಳ್ಳರು ಬೆಲೆ ಬಾಳುವ ಗಂಧದ ಗಿಡಗಳನ್ನು ಕಡಿದು ಕಳ್ಳತನ ಮಾಡಿರುವ ಬಗ್ಗೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಇದೇ ರೀತಿಯಾಗಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಹಾಗೂ ಹೊಳ್ಳಲ್ಕೆರೆ ತಾಲ್ಲೂಕ್ ಸುತ್ತಮುತ್ತ
ಜಮೀನುಗಳಲ್ಲಿ ಹಲವು ಶ್ರೀಗಂಧ ಕಳ್ಳತನದ ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ರೈತ ಸಂಘಟನೆ ಮುಖಂಡರು ಹಾಗೂ ರಾಜ್ಯ ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷರು ಪೊಲೀಸ್ ಅಧೀಕ್ಷಕರನ್ನು ಭೇಟಿ
ಮಾಡಿ ಶ್ರೀಗಂಧ ಕಳ್ಳರನ್ನು ಪತ್ತೆ ಮಾಡಿ ಕಳ್ಳತನ ಆಗುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರು,  ಹೆಚ್ಚುವರಿ
ಪೊಲೀಸ್ ಅಧೀಕ್ಷಕರಾದ ಶ್ರೀ.ಕುಮಾರಸ್ವಾಮಿ, ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಅನಿಲ್‍ಕುಮಾರ್ ಹಾಗೂ ಹೊಳಲ್ಕೆರೆ ವೃತ್ತ ನಿರೀಕ್ಷಕರವರಾದ ಎಂ.ಬಿ ಚಿಕ್ಕಣ್ಣನವರ್ ರವರಿಗೆ ಆರೋಪಿಗಳ ಬಗ್ಗೆ ನಿಗಾವಹಿಸುವಂತೆ
ಸೂಚನೆ ನೀಡಿದ್ದರು.

ಚಿತ್ರಹಳ್ಳಿ ಗೇಟ್ ಠಾಣೆಯ ಪಿ.ಎಸ್.ಐ ರವರಾದ ಕಾಂತರಾಜು ಇವರು ತಮ್ಮ ಸಿಬ್ಬಂದಿಯೊಂದಿಗೆ ಶುಕ್ರವಾರ ( ನವೆಂಬರ್.10)  ಗಸ್ತಿನಲ್ಲಿರುವಾಗ
ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು
ವಿಚಾರಿಸಿದಾಗ‌ ಶ್ರೀಗಂಧ ಕಳ್ಳತನ ಮತ್ತು ದರೋಡೆ ಮಾಡುವ ವಿಷಯ ತಿಳಿದು ಬಂದಿರುತ್ತದೆ.

ಆರೋಪಿತರು ಶ್ರೀಗಂಧ ಕಳವು ಮಾಡುವವರಾಗಿದ್ದು ಆರೋಪಿತರೆಲ್ಲರೂ ಗ್ಯಾಂಗ್ ಕಟ್ಟಿಕೊಂಡು ಹೊಳಲ್ಕೆರೆ
ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದ ದಿನೇಶ್ ಎಂಬುವವರ ತೋಟದಲ್ಲಿ, ಸಾಸಲು ಗ್ರಾಮದ ಪ್ರಶಾಂತ್‍ಕುಮಾರ, ಚಿಕ್ಕಂದವಾಡಿ ಗ್ರಾಮದ ಸುರೇಶ, ಹೊಳಲ್ಕೆರೆ ಟೌನ್‍ನ ಆನಂದಪ್ಪ, ಎನ್.ಜಿ.ಹಳ್ಳಿ ಗ್ರಾಮದ
ದ್ಯಾಮಪ್ಪ, ಶ್ರೀರಾಂಪುರ ವ್ಯಾಪ್ತಿಯ ವಿನಯ್, ಐಮಂಗಲ ಠಾಣಾ ವ್ಯಾಪ್ತಿಯ ಗೋಗುದ್ದುಹಳ್ಳಿಯ ನಾಗರಾಜ
ಎಂಬುವವರ ತೋಟಗಳಲ್ಲಿ ಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಿರುವುದಾಗಿ ಹಾಗೂ ರಕ್ತಚಂದನ,
ಆನೆದಂತ, ಪೆಂಗೋಲಿನ್ ಚಿಪ್ಪುಗಳು, ಹಾಗೂ ಮುಂತಾದವುಗಳನ್ನು ಕಳವು ಮಾಡಿ ಹಿರಿಯೂರು ನಗರದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದರು.

ಕೂಡಲೇ ಕಾರ್ಯಪ್ರವೃತ್ತರಾದ ಚಿತ್ರಹಳ್ಳ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ
ಚಿತ್ರದುರ್ಗ ಜಿಲ್ಲೆ ಚಿತ್ರಹಳ್ಳಿ ಗೇಟ್
ಪೊಲೀಸ್ ಠಾಣೆಯ 2 ಪ್ರಕರಣಗಳು, ಹೊಳಲ್ಕೆರೆ ಠಾಣೆಯ 2 ಪ್ರಕರಣಗಳು, ರಾಂಪುರ ಪೊಲೀಸ್ ಠಾಣೆಯ 1
ಪ್ರಕರಣ ಮತ್ತು ಐಮಂಗಲ ಠಾಣೆಯ 2 ಪ್ರಕರಣ ಒಟ್ಟು 7 ಪ್ರಕರಣಗಳಿಗೆ ಸಂಬಂಧಪಟ್ಟಂತೆ
1] 91 ಕೆ.ಜಿ 300 ಗ್ರಾಂ ಶ್ರೀಗಂಧ,
2] 15 ಕೆ.ಜಿ 500 ಗ್ರಾಂ ರಕ್ತ ಚಂದನ ಗಳೊಂದಿಗೆ
3] 25 ಕೆ.ಜಿ 400 ಗ್ರಾಂ
ತೂಕದ 2 ಆನೆ ದಂತಗಳು,
4] 34 ಕೆ.ಜಿ 100 ಗ್ರಾಂ ತೂಕದ ಪೆಂಗೋಲಿನ್ ಚಿಪ್ಪುಗಳು,
5] 1,10,000/- ರೂ
ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳು, 9ಮೊಬೈಲ್ ಗಳು ಮತ್ತುಇತರೆ ಆಯುಧಗಳನ್ನು
ವಶಪಡಿಸಿಕೊಳ್ಳಲಾಗಿರುತ್ತದೆ.

ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ.

ಎ1 ಚಂದ್ರಶೇಖರ್ ಈತನು ಕಳ್ಳತನ ಮಾಡಿದ ಶ್ರೀಗಂಧವನ್ನು ಸ್ವೀಕರಿಸುವವನಾಗಿದ್ದು ಈತನು ಎ3
ಪ್ರಶಾಂತ್.ಟಿ ಮತ್ತು ಎ4 ರಂಗಸ್ವಾಮಿ ರವರಿಂದ ಜಿಲ್ಲೆಯ ಯಾವ ಸ್ಥಳಗಳಲ್ಲಿ ಶ್ರೀಗಂಧ ಬೆಳೆಯಲಾಗಿದೆ ಎಂಬ
ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಎ2 ಖಲೀಲ್, ಎ5 ಪುನೀತ್ ನಾಯ್ಕ್, ಎ6 ರಾಮಾನಾಯ್ಕ್ ಹಾಗೂ
ಇತರೆಯವರ ಸಹಾಯದಿಂದ ಸದರಿ ಶ್ರೀಗಂಧ ಮರಗಳನ್ನು ಕಟಾವು ಮಾಡಿಸಿ ಅವುಗಳನ್ನು ಸ್ವೀಕರಿಸಿ ಮಾರಾಟ
ಮಾಡುತ್ತಿರುತ್ತಾನೆ. ಎ1 ಚಂದ್ರಶೇಖರ್ ಈತನ ಕಡೆಯಿಂದ ವನ್ಯ ಜೀವಿಗಳಿಗೆ ಸಂಬಂಧಿಸಿದ 2 ಆನೆ ದಂತಗಳು,
ಪೆಂಗೋಲಿನ್ ಚಿಪ್ಪುಗಳು ಹಾಗೂ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದು, ಇವುಗಳ ಬಗ್ಗೆ ತನಿಖೆ
ಮುಂದುವರೆದಿರುತ್ತದೆ.
ಸದರಿ ಆರೋಪಿತರು ಮತ್ತು ಮಾಲಿನ ಪತ್ತೆ ಕಾರ್ಯದಲ್ಲಿ

ಪ್ರಕರಣಗಳಲ್ಲಿನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ
ಹೊಳಲ್ಕೆರೆ ವೃತ್ತ ನಿರೀಕ್ಷಕರವರಾದ ಎಂ.ಬಿ
ಚಿಕ್ಕಣ್ಣನವರ್, ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಪಿ.ಎಸ್.ಐ. ಕಾಂತರಾಜು, ಹೊಳಲ್ಕೆರೆ ಪೊಲೀಸ್
ಠಾಣೆಯ ಪಿ.ಎಸ್.ಐ. ಸುರೇಶ್ ಮತ್ತು ಸಿಬ್ಬಂದಿಯವರಾದ ರುದ್ರೇಶ್, ರಾಜಶೇಖರ್,
ಆರ್.ಡಿ.ರಮೇಶ್‍ಕುಮಾರ, ರಮೇಶ, ನಿರಂಜನ, ಅವಿನಾಶ, ಮಂಜುನಾಥ, ಶ್ರೀಧರ, ಶೌರ್ಯ, ಯಶೋಧರ,
ಶಿವಮೂರ್ತಿ, ಶಿವಣ್ಣ,ಈ. ತಿಮ್ಮಣ್ಣ, ಸನಾವುಲ್ಲಾ, ಲೋಕೇಶ, ಶಿವರಾಜ, ಪ್ರದೀಪ್‍ಕುಮಾರ, ಸಂತೋಷ, ನೂರ್
ಅಹಮ್ಮದ್ ನದಾಫ್, ಹಾಗೂ ಶೋಭಾ, ಸುಲೋಚನ ರವರು ಪಾಲ್ಗೊಂಡಿರುತ್ತಾರೆ.

ಚಿತ್ರಹಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ರವರು ಶ್ಲಾಘಿಸಿ ನಗದು
ಬಹುಮಾನ & ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!