ಚಿತ್ರಹಳ್ಳಿ : ಮಕ್ಕಳಿಗೆ ನೋಟ್ ಬುಕ್ ವಿತರಣೆ

1 Min Read

ಸುದ್ದಿಒನ್, ಚಿತ್ರದುರ್ಗ, ಜೂನ್.10 : ಮಕ್ಕಳ ಚೆನ್ನಾಗಿ ಓದಿ ದೇಶದ ಒಳ್ಳೆ ಪ್ರಜೆಗಳಾಗಬೇಕು. ಗ್ರಾಮೀಣ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಶಕ್ತಿ ಇದೆ ಎಂದು ಜಿ ಎಂ ಲವಕುಮಾರ್ ಸಮಾಜ ಸೇವಕರು ಹೇಳಿದರು.

ತಾಲ್ಲೂಕಿನ ಭೀಮಸಮುದ್ರ ಸಮೀಪದ ಚಿತ್ರಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನೀಡುತ್ತದೆ. ಆದರೆ ಅವರಿಗೆ ಬೇಕಾದ ನೋಟ್ ಬುಕ್, ಪೆನ್ನು, ರಬ್ಬರ್, ಪೆನ್ಸಿಲ್, ಜಾಮೆಂಟರಿ ಬಾಕ್ಸ್ ನೀಡಿದ್ದೇವೆ. ಸತತ 4ನೇ ವರ್ಷ ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೇನೆ. ಸುಮಾರು 400 ಜನ ಮಕ್ಕಳಿಗೆ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರಿಂದ ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ವಿದ್ಯಾರ್ಥಿಗಳಾಗಬೇಕು
ಸಮಾಜದಲ್ಲಿ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ ತಂದೆ ತಾಯಿಗಳು ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೇಯಲ್ ಗೌಡ, ಮುಖ್ಯ ಶಿಕ್ಷಕರಾದ ಗಾಯತ್ರಿ ಪ್ರಭಾಕರ್, ವೀಣಾ, ಮಲ್ಲೇಶ್ವರಪ್ಪ, ದಿವ್ಯಾ ಹಾಗೂ ಗ್ರಾಮಸ್ಥರು ಪೋಷಕರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *