ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಫೆಬ್ರವರಿ 16ರಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಇದರ ನಡುವೆ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದ್ದಾರೆ.
ಡಾಲಿ ಹಾಗೂ ಧನ್ಯತಾ ಇತ್ತೀಚೆಗೆ ಒಂದು ಪ್ರೆಸ್ ಮೀಟ್ ಮಾಡಿ, ತಮ್ಮ ಲವ್ ಸ್ಟೋರಿ, ಮದುವೆ ಬಗ್ಗೆ ಪ್ರಿಪರೇಷನ್ ಎಲ್ಲದರ ಬಗ್ಗೆ ಮಾಹಿತಿ ನೀಡಿದ್ದರು. ಈಗಾಗಲೇ ಕನ್ನಡ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ಗಳಿಗೂ ಲಗ್ನ ಪತ್ರಿಕೆ ನೀಡಿದ್ದಾರೆ. ಯಶ್ ಅವರಿಗೂ ನೀಡಿದ್ದಾರೆ. ಆದರೆ ದರ್ಶನ್ ಅವರಿಗೆ ಮಾತ್ರ ನೀಡಿಲ್ಲ. ಈ ಸಂಬಂಧ ಪ್ರಶ್ನೆ ಎದುರಾಗಿತ್ತು. ದರ್ಶನ್ ಅವರನ್ನ ಯಾಕೆ ಮದುವೆಗೆ ಕರೆದಿಲ್ಲ ಎಂದು. ಆಗ ಡಾಲಿ, ‘ಎಲ್ಲರನ್ನು ಮದುವೆಗೆ ಕರೆದಿದ್ದೀವಿ ಎಂದ ಮೇಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದ್ರೆ ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಂದಲೇ ಕರೆಯುತ್ತೇನೆ’ ಎಂದಿದ್ದಾರೆ.
ಈ ಹೇಳಿಕೆ ಇದೀಗ ಸಿಕ್ಕಾ ಪಟ್ಟೆ ಟ್ರೋಲ್ ಆಗುತ್ತಿದೆ. ಡಾಲಿಗೆ ನಿಜಕ್ಕೂ ದರ್ಶನ್ ಅವರನ್ನ ಸಂಪರ್ಕ ಮಾಡೋದಕ್ಕೆ ಅಷ್ಟು ಕಷ್ಟನಾ..? ಸುಖಾ ಸುಮ್ಮನೆ ಹೀಗೆಲ್ಲಾ ಹೇಳಬಾರದು. ಅಣ್ಣ ಅಣ್ಣ ಎನ್ನುತ್ತಿದ್ದವರು ಅಣ್ಣನನ್ನು ಮದುವೆಗೆ ಕರೆಯೋದಕ್ಕೆ ಆಗುವುದಿಲ್ಲವೇ..? ಬೆಳೆಯುವವರೆಗೂ ಅಣ್ಣ ಅಣ್ಣ ಎನ್ನುತ್ತಿದ್ದವರು ಈಗ ಹೀಗೆ ಮಾತನಾಡೋದಾ..? ಎಂದಿದ್ದಾರೆ. ಇದಕ್ಕೆ ಡಾಲಿ ಧನಂಜಯ ಫ್ಯಾನ್ಸ್ ಕೂಡ ಕಮೆಂಟ್ ಹಾಕಿದ್ದು, ಡಾಲಿ ತಮ್ಮ ಪರಿಶ್ರಮದಿಂದಲೇ ಬೆಳೆದು ಬಂದದ್ದು. ಅವರನ್ನ ಯಾರೂ ಬೆಳೆಸಿಲ್ಲ. ಅವರು ಮದುವೆಗೆ ಆಹ್ವಾನಿಸಲ್ಲ ಅಂತ ಹೇಳಿಲ್ಲ. ಸಂಪರ್ಕಿಸಲು ಸಾಧ್ಯವಾಗಿಲ್ಲ ಅಂತಷ್ಟೇ ಹೇಳಿದ್ದಾರೆ ಎಂದಿದ್ದಾರೆ.