ಹೊಟೆಲ್ ನಲ್ಲಿಟೀ ಲೋಟ ತೊಳೆಯುವಾಗ ಅಕ್ಕನ ಫ್ರೆಂಡ್ ಗೆ ಸಿಕ್ಕಿಬಿದ್ದ ಚಿತ್ರದುರ್ಗದ ಗಗನ

suddionenews
1 Min Read

ಜೀ ಕನ್ನಡದಲ್ಲಿ ಮಹಾನಟಿಯಲ್ಲಿ ಈ ವಾರ ಎಲ್ಲರಿಗೂ ಪ್ರಾಕ್ಟಿಕಲ್ ಲೈಫ್ ನ ಅನುಭವ ಮಾಡಿಸಿದ್ದಾರೆ. ಎಷ್ಟೋ ಜನ ತಮ್ಮ ಜೀವನ ಸಾಗಿಸುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಾರೆ. ಟೀ ಮಾರುವವರ ಹಿಂದೆ, ಬಟ್ಟೆ ಮಾರುವವರ ಹಿಂದೆ, ಮಾರ್ಕೆಟ್ ನಲ್ಲಿ ತರಕಾರಿ ಮಾರುವವರ ಹಿಂದೊಂದು ಕಥೆ ಇರುತ್ತದೆ‌. ಒಂದೊಂದು ಕಷ್ಟ ಕಾರ್ಪಣ್ಯ ಇರುತ್ತದೆ. ಅದೆಲ್ಲವನ್ನು ಸ್ಪರ್ಧಿಗಳು ಇಂದು ತಮ್ಮದೇ ರೀತಿಯಲ್ಲಿ ವೇದಿಕೆ ಮೇಲೆ ಅಭಿನಯಿಸಿ ತೋರಿಸಿದ್ದಾರೆ.

ಟೀ ಕೆಫೆಗೆ ಗಗನಾ ಭೇಟಿ ನೀಡಿದರು. ಅಲ್ಲಿ ಇಬ್ಬ ಮಹಿಳೆಯೇ ಟೀ ಮಾಡಿ, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಹೋದ ಕೂಡಲೇ ನನಗೆ ಟೀ ಮಾಡಲು ಬರಲ್ಲ ಎಂದೇ ಹೇಳಿದರು ಗಗನ. ಆದರೆ ಆ ಮಹಿಳೆ ಎಲ್ಲಾ ಕೆಲಸವನ್ನು ಹೇಳಿಕೊಟ್ಟರು. ಅದು ಮಡಿಕೆ ಟೀ. ಹೀಗಾಗಿ ಮಡಿಕೆಯನ್ನು ಬಿಸಿ ನೀರಿನಲ್ಲಿ ನೆನೆ ಹಾಕಲಾಗಿತ್ತು. ಅದನ್ನು ತೋರಿಸಿದರು. ಬಳಿಕ ಗಗನಾಗೆ ಲೋಟ ತೊಳೆಯುವುದಕ್ಕೆ ಹೇಳಿದರು. ಅದರಂತೆ ಗಗನಾ ಬ್ಯಾಗ್ ಸೈಡ್ ನಲ್ಲಿಟ್ಟು ಲೋಟ ತೊಳೆಯುತ್ತಿದ್ದರು. ಆಗ ‘ಮಹಾನಟಿ ಮಹಾನಟಿ ಅಂತ ಕುಣ್ಕೊಂಡ್ ಕುಣ್ಕೊಂಡು ಬಂದೆ. ಆದರೆ ಇಲ್ಲಿ ಟೀ ಲೋಟ ತೊಳೆಯುವುದಕ್ಕೆ ಬಿಟ್ಟಿದ್ದಾರೆ. ಟೀ ಲೋಟ ತೊಳೆಯುವುದಕ್ಕೆ ಇಷ್ಟೊಂದು ಮೇಕಪ್ ಹಾಕಿಕೊಂಡು ಬರಬೇಕಿತ್ತಾ’ ಅಂತ ಕಾಮಿಡಿ ಮಾಡಿ ಎಲ್ಲರನ್ನು ನಗಿಸಿದ್ದಾರೆ.

https://www.instagram.com/reel/C5_NB8yKqmG/?igsh=MWVqMjVmNzMwY2YwMA==

ಅದು ಜಸ್ಟ್ ತರಬೇತಿ. ಈಗ ಟೀ ಮಾರುವವರ ಜೀವನವನ್ನೇ ವೇದಿಕೆ ಮೇಲೆ ತರಬೇಕಿತ್ತು ಗಗನಾ. ಜಡ್ಸಸ್ ಗಳು ಕೂಡ ಶುರು ಮಾಡಲು ಒಪ್ಪಿಗೆ ನೀಡಿದರು. ಗಗನಾ ತಮ್ಮ ಅಭಿನಯ ಶುರು ಮಾಡಿಕೊಂಡರು. ‘ನಾನು ಎಸ್ಎಸ್ಎಲ್ಸಿ ಫೇಲ್ ಆದೆ. ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ. ಅಣ್ಣ ಬೇರೆ ಸತ್ತು ಹೋದ. ಮಗುವಿನ ಜವಾಬ್ದಾರಿ ನಮ್ಮ ಹೆಗಲ ಮೇಲಾಕಿ ಅತ್ತಿಗೆ ಹೋಗೆ ಬಿಟ್ಟಳು. ನನಗೂ ಮದುವೆಯಾಗುವ ಆಸೆ. ಆದರೆ ಜವಾಬ್ದಾರಿ ಹೆಗಲ ಮೇಲಿದೆಯಲ್ಲ’ ಎಂದು ಕಣ್ಣೀರು ಹಾಕಿಸಿಬಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *