ಚಿತ್ರದುರ್ಗ | ನವೆಂಬರ್ 18 ರಿಂದ 24 ರವರೆಗೆ ಕಬೀರಾನಂದ ಹಾಗೂ ಕಬೀರೇಶ್ವರರ ಪುಣ್ಯಾರಾಧನೆ

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 15 : ನಗರದ ಕಬೀರಾನಂದ ನಗರದ ಶ್ರೀ ಗುರು ಕಬೀರಾನಂದ ಆಶ್ರಮದವತಿಯಿಂದ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 68ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ 58ನೇ ಪುಣ್ಯಾರಾಧನೆ ಸಮಾರಂಭವೂ ನ. 18 ರಿಂದ 24 ರವರೆಗೆ ನಡೆಯಲಿದೆ ಎಂದು ಶ್ರೀ ಗುರು ಕಬೀರಾನಂದಾ ಶ್ರಮದ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.

ನ. 18 ಸೋಮವಾರದ ಕಾರ್ತೀಕ ತದಿಗೆಯಿಂದ ನ. 24ರ ಭಾನುವಾರ ಕಾರ್ತಿಕ ಬಹುಳ ನವಮಿಯವರೆಗೂ ಪ್ರತಿ ದಿನ ಸಂಜೆ 7 ರಿಂದ 9 ರವರೆಗೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆಯಲಿದೆ. ನ. 24ರ ಭಾನುವಾರ ಪುಣ್ಯಾರಾಧನೆಯ ಸಮಾರೊಪ ನಡೆಯಲಿದ್ದು, ಅಂದು ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದ್ದು, ಸಂಜೆ ಮಹಾ ಮಂಗಳಾರತಿ ನಡೆಯಲಿದೆ.

ನ.24ರ ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಸ್ವಾಮಿ ಬ್ರಹ್ಮನಿಷ್ಠಾನಂದಜೀ ಉಪಸ್ಥಿತರಿರುವರು.

ಸಾಹಿತಿಗಳಾದ ಹುರಳಿ ಬಸವರಾಜು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕøತರು, ನಿವೃತ್ತ ಕಾಲೇಜು ಶಿಕ್ಷಣ ನಿರ್ದೆಶಕರಾದ ಶ್ರೀಮತಿ ಡಾ.ಕಮಲಮ್ಮ ಹಾಗೂ ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ.ವಿ.ಎಲ್,ಪ್ರಶಾಂತ್‍ರವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಸಿ.ನಾಗರಾಜ್, ನಿವೃತ್ತ ಇಂಜಿನಿಯರ್ ಸಿ.ಕೆ,ತ್ಯಾಗರಾಜ್, ನಗರಸಭಾ ಸದಸ್ಯರಾದ ವೆಂಕಟೇಶ್, ಮದೇಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೆಶಕರಾದ ಸಿದ್ದವ್ವನಹಳ್ಳಿ ಪರಮೇಶ್, ಜಿ.ಪಂ.ನಿವೃತ್ತ ವ್ಯವಸ್ಥಾಪಕರಾದ ನಾಗರಾಜ್ ಸಂಗಂ ಭಾಗವಹಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *