ಚಿತ್ರದುರ್ಗ, (ಫೆ.14) : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಘಟಕದ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯವಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಕೊನೆಯ ದಿನವಾದ ಸೋಮವಾರ 40 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿವೆ.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಹೆಚ್.ಲಕ್ಷ್ಮಣ್, ಸಿ.ಹೆಂಜಾರಪ್ಪ, ಎಂ.ಯೋಗೀಶ, ಟಿ.ತಿಪ್ಪೇಸ್ವಾಮಿ, ದಿನೇಶ್ ಗೌಡಗೆರೆ ಹಾಗೂ ಬಿ.ಎಸ್.ಲಕ್ಷ್ಮಣ್ ಸೇರಿದಂತೆ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನಕ್ಕೆ ದಿನೇಶ್ ಗೌಡಗೆರೆ, ನರೇನಹಳ್ಳಿ ಅರುಣ್ ಕುಮಾರ್, ಎಸ್.ಸಿದ್ದರಾಜು, ತಿಪ್ಪೇಸ್ವಾಮಿ.ಎನ್.ಡಿ ಸೇರಿದಂತೆ ಒಟ್ಟು ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಘಟಕದ ಉಪಾಧ್ಯಕ್ಷರ ಸ್ಥಾನಕ್ಕೆ ಡಿ.ಈಶ್ವರಪ್ಪ, ತಿಪ್ಪೇಸ್ವಾಮಿ ಎನ್.ಡಿ, ವೈ.ವೆಂಕಟೇಶ್, ಸಿ.ಪಿ.ಮಾರುತಿ, ಎಲ್.ವಿ.ಯೋಗೇಶ್ ಕುಮಾರ್ ಸೇರಿದಂತೆ ಒಟ್ಟು ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಸಿದ್ದರಾಜು ಹಾಗೂ ಸಿ.ಹೆಂಜಾರಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ವಿರೇಶ್ ವಿ, ನಾಗರಾಜ ಕಟ್ಟೆ ಹಾಗೂ ಎಂ.ಜೆ.ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಕುಮಾರಸ್ವಾಮಿ ಡಿ ಹಾಗೂ ಮೇಘ ಗಂಗಾಧರ್ ನಾಯ್ಕ್ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಹೆಚ್.ಟಿ.ಪ್ರಸನ್ನ, ಪಿ.ಅಂಜಿನಪ್ಪ, ಜೆ.ತಿಮ್ಮಣ್ಣ, ಓ.ರಾಮಸ್ವಾಮಿ, ಸಿರಿಗೆರೆ ಚಿಕ್ಕೇಶ್, ವಿ.ಧನಂಜಯ, ಎನ್.ಮಾರುತಿ, ಬಿ.ಆರ್.ನಾಗೇಶ್, ಶಿವರಾಜ್ ಆರ್, ಎಂ.ರಾಜು, ಅನಂತ ಪದ್ಮನಾಭರಾವ್, ಹೆಚ್.ತಿಪ್ಪೇಸ್ವಾಮಿ, ಬಿ.ಎಸ್.ಲಕ್ಷ್ಮಣ್, ನಾಗತಿಹಳ್ಳಿ ಮಂಜುನಾಥ್, ಮುತ್ತುಸ್ವಾಮಿ ಕೆ.ಎಂ, ಎಂ.ಎನ್.ಅಹೋಬಳಪತಿ, ಎಸ್.ಜೆ.ದ್ವಾರಕನಾಥ್, ಎಂ.ಹನೀಪ್, ಟಿ.ತಿಪ್ಪೇಸ್ವಾಮಿ, ಡಿ.ಎನ್.ಗೋವಿಂದಪ್ಪ, ಈರಣ್ಣ ಯಾದವ್, ಗೌನಹಳ್ಳಿ ಗೋವಿಂದಪ್ಪ, ಬಿ.ಎಸ್.ವಿನಾಯಕ ಸೇರಿದಂತೆ ಒಟ್ಟು 23 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಫೆ.16ರಂದು ಮಧ್ಯಾಹ್ನ 1 ಗಂಟೆಯ ನಂತರ ನಾಮಪತ್ರಗಳ ಪರಿಶೀಲನೆ ಹಾಗೂ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಮಾಡಲಾಗುವುದು.
ಫೆ.19 ರಂದು ಮಧ್ಯಾಹ್ನ 1 ಗಂಟೆಯ ನಂತರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ.
ಫೆ.19ರಂದು ಮಧ್ಯಾಹ್ನ 2 ಗಂಟೆಯ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಮಾಡಲಾಗುವುದು.
ಫೆ.27ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಗತ್ಯ ಬಿದ್ದಲ್ಲಿ ಚುನಾವಣೆ ನಡೆಸಲಾಗುವುದು.
ಫೆ.27ರಂದು ಮಧ್ಯಾಹ್ನ 3.30ರ ನಂತರ ಮತಗಳ ಎಣಿಕೆ, ಫಲಿತಾಂಶ ಪ್ರಕಟ,
ಫೆ.28ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಚುನಾವಣಾಧಿಕಾರಿ ಬಿ.ಧನಂಜಯ ತಿಳಿಸಿದ್ದಾರೆ.