ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 09 : ಅಹಿಂದ ನೇತಾರ, ಭದ್ರಾ ಮೇಲ್ದಂಡೆ ಹೋರಾಟಗಾರ ದಿವಂಗತ ಮುರುಘ ರಾಜೇಂದ್ರ ಒಡೆಯರ್ ಪತ್ನಿ ರಜನಿ ಒಡೆಯರ್ (68 ವರ್ಷ) ಮಂಗಳವಾರ ನಿಧನರಾದರು.
ಪತಿ ಸಾವಿನ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಧೀರ್ಘಕಾಲದಿಂದ ಬಳಲುತ್ತಿದ್ದರು. ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಪುತ್ರಿ, ಮೂವರು ಪುತ್ರರು ಇದ್ದಾರೆ.
ಬುರುಜನಹಟ್ಟಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಬುಧವಾರ ವ್ಯವಸ್ಥೆ ಮಾಡಲಿದ್ದು, ಬಳಿಕ ಕನಕ ವೃತ್ತದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




