ಮಾಹಿತಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ನ.09) : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಕರಡು ಪಟ್ಟಿಯನ್ನು ಬುಧವಾರದಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕಿನ ಮತದಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು
13,48,457 ಮತದಾರರು ಇದ್ದಾರೆ.
ಪ್ರಕಟಿಸಲಾಗಿರುವ ಮತದಾರರ ಕರಡು ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 1648 ಮತದಾನ ಕೇಂದ್ರಗಳಿದ್ದು, 13,48,457 ಮತದಾರರಿದ್ದಾರೆ.
ಇದರಲ್ಲಿ ಪುರುಷ-6,77,105, ಮಹಿಳೆ-6,71,277, ಇತರೆ-75 ಮತದಾರರಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 284 ಮತಗಟ್ಟೆಗಳಿದ್ದು, ಪುರುಷ-118412, ಮಹಿಳೆ-115329, ಇತರೆ-03,
ಒಟ್ಟು-233744 ಮತದಾರರಿದ್ದಾರೆ.
ಚಳ್ಳಕೆರೆ ಕ್ಷೇತ್ರದಲ್ಲಿ 259 ಮತಗಟ್ಟೆ, ಪುರುಷ-106045,
ಮಹಿಳೆ-105927, ಇತರೆ-06, ಒಟ್ಟು-211978 ಮತದಾರರಿದ್ದಾರೆ.
ಚಿತ್ರದುರ್ಗ ಕ್ಷೇತ್ರದಲ್ಲಿ 283 ಮತಗಟ್ಟೆ, ಪುರುಷ-123699,
ಮಹಿಳೆ-125020, ಇತರೆ-31, ಒಟ್ಟು-248750 ಮತದಾರರಿದ್ದಾರೆ.
ಹಿರಿಯೂರು ಕ್ಷೇತ್ರದಲ್ಲಿ 285 ಮತಗಟ್ಟೆಗಳಿದ್ದು,
ಪುರುಷ-116259,
ಮಹಿಳೆ-116898, ಇತರೆ-32, ಒಟ್ಟು-233189 ಮತದಾರರಿದ್ದಾರೆ.
ಹೊಸದುರ್ಗ ಕ್ಷೇತ್ರದಲ್ಲಿ 240 ಮತಗಟ್ಟೆಗಳಿದ್ದು,
ಪುರುಷ-97455,
ಮಹಿಳೆ-94971, ಒಟ್ಟು-192426 ಮತದಾರರಿದ್ದಾರೆ.
ಹೊಳಲ್ಕೆರೆ ಕ್ಷೇತ್ರದಲ್ಲಿ 297 ಮತಗಟ್ಟೆಗಳು,
ಪುರುಷ-115235,
ಮಹಿಳೆ-113132, ಇತರೆ-03, ಒಟ್ಟು-228370 ಮತದಾರರಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟಾರೆ 20378 ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಸ್ಥಳಾಂತರಗೊಂಡವರು, ಮೃತರು ಸೇರಿದಂತೆ ವಿವಿಧ ಕಾರಣಗಳಿಗಾಗಿ 55101 ಮತದಾರರ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು
ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯ ಪ್ರಭು ತಿಳಿಸಿದ್ದಾರೆ.