Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ವಿಧಾನ ಪರಿಷತ್ ಚುನಾವಣೆ: ಒಟ್ಟು ಸಲ್ಲಿಕೆಯಾದ ನಾಮ ಪತ್ರಗಳು ಎಷ್ಟು ?

Facebook
Twitter
Telegram
WhatsApp

ಚಿತ್ರದುರ್ಗ, (ನವೆಂಬರ್.23) : ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನವೆಂಬರ್ 23ರಂದು ಸ್ಪರ್ಧೆ ಕೋರಿ ಆರು ನಾಮಪತ್ರಗಳು ಸ್ವೀಕೃತವಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ನಾಮಪತ್ರಗಳ ಸಲ್ಲಿಸಿದವರ ವಿವರ ಇಂತಿದೆ. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ನವೆಂಬರ್ 23ರಂದು ಮೂವರು ಅಭ್ಯರ್ಥಿಗಳಿಂದ ಒಟ್ಟು ಆರು ನಾಮಪತ್ರಗಳು ಸಲ್ಲಿಕೆಯಾಗಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಸೋಮಶೇಖರ ಬಿ ಹಾಗೂ ಎಸ್.ಮಂಜುಳ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದರು.

ಕೆ.ಎಸ್.ನವೀನ್ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಒಂದು ನಾಮಪತ್ರ ಹಾಗೂ ಪಕ್ಷೇತರರಾಗಿ ಮೂರು ನಾಮಪತ್ರಗಳನ್ನು ಸಲ್ಲಿಸಿದರು.
ನವೆಂಬರ್ 20 ರಂದು ಪಕ್ಷೇತರ ಅಭ್ಯರ್ಥಿಯಾಗಿ ಹನುಮಂತಪ್ಪ ಅವರು ನಾಮಪತ್ರ ಸಲ್ಲಿಸಿದ್ದರು.

ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕ ಮುಕ್ತಾಯವಾಗಿದ್ದು, ನವೆಂಬರ್ 16 ರಿಂದ ನವೆಂಬರ್ 23 ರವರೆಗೆ ನಾಲ್ಕು ಅಭ್ಯರ್ಥಿಗಳಿಂದ ಒಟ್ಟು ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬ್ಯಾಂಕ್ ನಿರ್ಲಕ್ಷ್ಯ : ಬಡ್ಡಿ ಸಮೇತ ಪರಿಹಾರ ನೀಡಲು ಗ್ರಾಹಕರ ನ್ಯಾಯಾಲಯ ಆದೇಶ

   ದಾವಣಗೆರೆ ಅ.18 : ನಗರದ ಎ.ವಿ.ಕೆ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ನಿಲ್ಯಕ್ಷದಿಂದ ಗ್ರಾಹಕರೊಬ್ಬರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೂಲಕ ಗ್ರಾಹಕರಿಗೆ ಬಡ್ಡಿ ಸಮೇತ ಪರಿಹಾರ

ಪೊಲೀಸರಿಗೆ ಗುಡ್ ನ್ಯೂಸ್ : ವಿಮಾ ಹಣ 50 ಲಕ್ಷಕ್ಕೆ ಏರಿಕೆ..!

  ಪೊಲೀಸರಿಗೆಂದೆ ಗುಂಪು ವಿಮಾ ಯೋಜನೆ ಇದೆ‌. ಅದರಲ್ಲಿ ಪೊಲೀಸರಿಗೆ 20 ಲಕ್ಷ ಹಣ ಸಿಗಲಿದೆ. ಆದರೆ ಆ ಮೊತ್ತ ಏರಿಕೆಯಾಗಿದ್ದು, ಪೊಲೀಸರಿಗೆ ಸಂತಸ ತಂದಿದೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕ ಇಲಾಖೆ ಇಂದು

ಟಿಕೆಟ್ ವಂಚನೆ ಪ್ರಕರಣ: ಪ್ರಹ್ಲಾದ್ ಜೋಶಿಗೆ ರಾಜೀನಾಮೆ ನೀಡುವಂತೆ ಒತ್ತಾಯ

  ಬೆಂಗಳೂರು: ಗೋಪಾಲ್ ಜೋಶಿಯವರ ವಿರುದ್ಧ ದಾಖಲಾದ ಕೇಸ್ ಸಂಬಂಧ ಸಚಿವ ದಿನೇಶ್ ಗುಂಡೂರಾವ್, ಇದೀಗ ಪ್ರಹ್ಲಾದ್ ಜೋಶಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೀವೂ ಮೊದಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದೇ

error: Content is protected !!