ಸುದ್ದಿಒನ್,

ಚಿತ್ರದುರ್ಗ, ಮಾ. 24 : ನಗರದ ಕೆಳಗೋಟೆ ನಿವಾಸಿ, ಹಿಂದಿನ ಕೆ.ಇ.ಬಿ. ನಿವೃತ್ತ ನೌಕರ ಕಿಲ್ಲೇದಾರ ವಂಶಸ್ಥ ವೀರಭದ್ರಪ್ಪ ಅವರು ಇಂದು ಮಧ್ಯಾಹ್ನ 12-45 ರ ಸುಮಾರಿಗೆ ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾರಣಕ್ಕಾಗಿ ನಿಧನ ಹೊಂದಿದರು.

ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಪತ್ನಿ, ಐವರು ಪುತ್ರಿಯರು, ಎಂಟು ಜನ ಮೊಮ್ಮಕ್ಕಳು, ಅಳಿಯಂದಿರು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ : ಮೃತರ ಅಂತ್ಯಕ್ರಿಯೆ ಮಾ. 25ರ ಮಂಗಳವಾರ ಬೆಳಗ್ಗೆ 09-30 ಗಂಟೆ ಸುಮಾರಿಗೆ ಜೋಗಿಮಟ್ಟಿ ರಸ್ತೆಯಲ್ಲಿನ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

