ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ವಿಶೇಷವಾದ ಭಕ್ಷ್ಯ ಭೋಜನ ಹಾಗೂ ಸಿಹಿ ಊಟ ಸಿದ್ದಪಡಿಸಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರಾದ ಮಹದೇವಯ್ಯನವರು ಸ್ವತಃ ನಿರಾಶ್ರಿತರಿಗೆ ಬಡಿಸಿ ನೀವುಗಳ್ಯಾರು ನಿರಾಶ್ರಿತರಲ್ಲ. ಪ್ರಕೃತಿ ಎಲ್ಲರನ್ನು ಸಲಹುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು.

ನಿರಾಶ್ರಿತರ ಕೇಂದ್ರದಲ್ಲಿ ಕೆಲವರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಪರಸ್ಪರರು ಯುಗಾದಿ ಹಬ್ಬದ ಖುಷಿಯನ್ನು ಹಂಚಿಕೊಂಡರು.

