ಚಿತ್ರದುರ್ಗ | ಸಿಡಿಲಿಗೆ ಇಬ್ಬರ ಸಾವು

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಿತ್ರದುರ್ಗ, ಮೇ. 21 : ಸೋಮುವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದ್ದಿದ್ದು ಸಿಡಿಲು ಬಡಿದು ಮಹಾರಾಷ್ಟ್ರ ಮೂಲದ ಲಕ್ಷ್ಮಿ (66) ವರ್ಷ ಮಹಿಳೆ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ದಿಂದ  ಹೊಟ್ಟೆ ಪಾಡಿಗಾಗಿ  ತಾಲ್ಲೂಕಿನ ರೇಖಲಗೆರೆ ಕೆರೆಯಾಂಗಳದಲ್ಲಿ  ಶೆಡ್ ನಿರ್ಮಾಣ ಮಾಡಿಕೊಂಡು ಕಟ್ಟಿಗೆ ಕಡಿದು ಇದ್ದಲು ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು ರಾತ್ರಿ ಸೇಡಿನಲ್ಲಿ ಮಲಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ನಾಯಕನಹಟ್ಟಿ ಪಿಎಸ್ ಐ ಶಿವಕುಮಾರ್ ಪರಶೀಲನೆ ‌ನಡೆಸಿದ್ದಾರೆ.

ಮೊಳಕಾಲ್ಮೂರು ತಾಲ್ಲೂಕಿನ ಮೇಲಿನಕಣಿವೆ ಗ್ರಾಮದಲ್ಲಿ  ಸಿಡಿಲು ಬಡಿದ ರೈತನೊಬ್ಬ ಅಸುನಿಗಿದ್ದಾನೆ.

ಮಂಗಳವಾರ ಮಧ್ಯಾಹ್ನ 2ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು ಹೊಲದಲ್ಲಿ ಹತ್ತಿ ಬೀಜ ನಾಟಿ ಮಾಡುವಾಗ ಸಿಡಿಲು ಬಡಿದಿದೆ ಸಿಡಿಲಿನ ಹೊಡೆತಕ್ಕೆ   ಮೇಗಳಕಣಿವೆ ಗ್ರಾಮದ ನಿಂಗರಾಜ್ (25)  ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Share This Article
Leave a Comment

Leave a Reply

Your email address will not be published. Required fields are marked *