ಸುದ್ದಿಒನ್, ಚಿತ್ರದುರ್ಗ, (ಡಿ.01) : ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020–21ನೇ ಸಾಲಿನಲ್ಲಿ ನಡೆದಿದ್ದ ಒಟ್ಟು 65 ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ 2,12,64,732 ಮೌಲ್ಯದ ವಸ್ತುಗಳನ್ನು ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಬುಧವಾರ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ. ಜಿ. ಡಿಎಸ್ ಪಿ. ಪಾಂಡುರಂಗ, ಹಿರಿಯೂರು ಡಿಎಸ್ ಪಿ. ರೋಷನ್ ಜಮೀರ್, ಚಳ್ಳಕೆರೆ ಡಿಎಸ್ ಪಿ ಶ್ರೀಧರ್, ಡಿಎಆರ್ ಡಿ ಎಸ್ ಪಿ.ತಿಪ್ಪೇಸ್ವಾಮಿ, ಅವರು ವಾರಸುದಾರರಿಗೆ ಚಿನ್ನಾಭರಣ, ನಗದು, ವಾಹನ ಹಾಗೂ ಬೆಳೆ ಬಾಳುವ ವಸ್ತುಗಳನ್ನು ಹಿಂತಿರುಗಿಸಿದರು.

ಈ ವೇಳೆ ಮಾಹಿತಿ ನೀಡಿದ ಎಸ್ ಪಿ ರಾಧಿಕಾ. ಜಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020–21ನೇ ಸಾಲಿನಲ್ಲಿ ದರೋಡೆ, ಸುಲಿಗೆ, ಮನೆ ಕಳ್ಳತನ ಪ್ರಕರಣ ಭೇದಿಸಿ,ಒಟ್ಟು 65 ಪ್ರಕರಣಗಳಲ್ಲಿ
2,12,64,732 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
14 ಲಕ್ಷ 31 ಸಾವಿರ ರೂಪಾಯಿ ಮೌಲ್ಯದ 22 ವಾಹನಗಳು,
54,85,272 ರೂ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ದೇವರ ಒಡವೆಗಳು, ಹಾಗೂ
63,81,462 ಸಾವಿರ ರೂಪಾಯಿ ನಗದು,
ಇತರೆ 101,39,67,000 ಒಟ್ಟು 652,12,64,732-00 ವಶಪಡಿಸಿಕೊಂಡಿದ್ದು ಅದೆಲ್ಲವನ್ನು ವಾರಸುದಾರರಿಗೆ ನೀಡುವುದರ ಜೊತೆಗೆ 1 ಕೋಟಿ 40 ಲಕ್ಷ ಇತರೇ ವಸ್ತುಗಳನ್ನು ಹಸ್ತಾಂತರ ಮಾಡಿದ್ದೇವೆ ಎಂದು ಹೇಳಿದರು.
ಒಟ್ಟು 2 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಆರೋಪಗಳಿಂದ ವಶಕ್ಕೆ ಪಡೆದು ಹಸ್ತಾಂತರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಪೋಲಿಸ್ ಇಲಾಖೆಯ ಮೇಲೆ ವಿಶ್ವಾಸ ಮತ್ತಷ್ಟು ಹೆಚ್ಚಾಗುವಂತೆ ಮಾಡಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ ರಾಧಿಕಾ ಶ್ಲಾಘಿಸಿದರು.

