in ,

featuredfeatured

ಕಬ್ಜ ಚಿತ್ರದಲ್ಲಿ ಚಿತ್ರದುರ್ಗದ ಅವಳಿ ಮಕ್ಕಳ ನಟನೆ : ಆ ಮಕ್ಕಳು ಯಾರು ಗೊತ್ತಾ ?

suddione whatsapp group join

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮಾ.17): ಶುಕ್ರವಾರದಿಂದ ಪ್ರದರ್ಶನಗೊಳ್ಳುತ್ತಿರುವ ಪ್ಯಾನ್ ಇಂಡಿಯಾ ಮೂವಿ ಕಬ್ಜ ಚಿತ್ರದಲ್ಲಿ ಉಪೇಂದ್ರನ ಮಕ್ಕಳಾಗಿ ಚಿತ್ರದುರ್ಗದ ಶ್ರೀರಾಮ ಮೆಡಿಕಲ್ ಎಂಪೋರಿಯಂನ್ ವೈಶಾಖ್ ಪ್ರೀತಿ ದಂಪತಿಗಳ ನಾಲ್ಕು ವರ್ಷದ ಅವಳಿ ಮಕ್ಕಳಾದ ಅಗಸ್ತ್ಯ ಹಾಗೂ ಅಚಿಂತ್ಯ ಇವರುಗಳು ನಟಿಸಿದ್ದಾರೆ.

ಕಳೆದ ಏಳೆಂಟು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಂದರ್ಶನದಲ್ಲಿ ಅವಳಿ ಬಾಲಕರಿಬ್ಬರ ಡೈಲಾಗ್ ಮೆಚ್ಚಿ ಚಿತ್ರದಲ್ಲಿ ನಟಿಸಲು ಅವಕಾಶ ಕಲ್ಪಿಸಲಾಯಿತು ಎಂದು ಪೋಷಕರುಗಳಾದ ವೈಶಾಖ್ ಮತ್ತು ಪ್ರೀತಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

(ವೈಶಾಖ್ ಅವರ ಮೊಬೈಲ್ ಸಂಖ್ಯೆ : 97425 10448)

ಉಪೇಂದ್ರ, ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಇವರುಗಳು ನಟಿಸಿರುವ ಕಬ್ಜ ಚಿತ್ರದಲ್ಲಿ ಚಿತ್ರದುರ್ಗದ ಅವಳಿ ಮಕ್ಕಳು ನಟಿಸಿರುವುದು ಒಂದು ವಿಶೇಷ.  ಬಸವೇಶ್ವರ ಚಿತ್ರಮಂದಿರದಲ್ಲಿ ತೆರೆಕಂಡಿರುವ ಕಬ್ಜ ಚಿತ್ರ ಯಶಸ್ವಿಯಾಗಿ ನೂರು ದಿನ ಪೂರೈಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಅಪ್ಪು ಹುಟ್ಟುಹಬ್ಬ : ಅಭಿಮಾನಿಗಳಿಗೆ ಒಂದು ಕಡೆ ಸಂಭ್ರಮ.. ಮತ್ತೊಂದು ಕಡೆ ಅಪ್ಪು ಇಲ್ಲದ ಬೇಸರ..!

ಆಮ್ ಆದ್ಮಿ ಪಾರ್ಟಿಯ ಚಿತ್ರದುರ್ಗದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ : ಬಿ.ಇ.ಜಗದೀಶ್