ಚಿತ್ರದುರ್ಗ: ನಗರದ ಬುರುಜಿನಹಟ್ಟಿ ನಿವಾಸಿ, ಪೈಲ್ವಾನ್ ಹೊನ್ನಪ್ಪ ಸೊಸೆ ತೊಳಸಮ್ಮ (68) ಶನಿವಾರ ನಿಧನ ಹೊಂದಿದರು. ಪತಿ, ನಾಲ್ವರು ಪುತ್ರಿಯರು ಇದ್ದಾರೆ. ಕನಕ ವೃತ್ತ ಸಮೀಪದ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಪತಿ, ಕಂಪಳೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಎಚ್.ಕೃಷ್ಣಪ್ಪ ತಿಳಿಸಿದ್ದಾರೆ.


