ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 26 : ನಗರದ ಬ್ಯಾಂಕ್ ಕಾಲೋನಿ ನಿವಾಸಿ ಹಾಗೂ ಮೆದೇಹಳ್ಳಿ ರಸ್ತೆಯ ಈಶ್ವರಿ ಮೆಡಿಕಲ್ ಸ್ಟೋರ್ಸ್ ನ ಮಾಲೀಕರು ತಿಪ್ಪೇಸ್ವಾಮಿ ಟಿ.ವಿ. (59 ವರ್ಷ) ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಎರಡೂ ಕಣ್ಣುಗಳನ್ನು ಮಣಿಪಾಲ ನೇತ್ರಾಲಯಕ್ಕೆ ದಾನ ಮಾಡಿ, ಸಾವಿನ ನಂತರವೂ ಮೂರ್ನಾಲ್ಕು ಜನಕ್ಕೆ ಬೆಳಕಾಗಿದ್ದಾರೆ.

ಅಂತ್ಯಕ್ರಿಯೆ ಇಂದು ಸಂಜೆ ತಾಲ್ಲೂಕಿನ ತುರುವನೂರಿನ ಅವರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ಮೊ: 9036262241 ಸಂಪರ್ಕಿಸಲು ಕೋರಿದೆ.

