ಚಿತ್ರದುರ್ಗ | ಪೊಲೀಸರ ವಾಹನದ ಮೇಲೆ ಕಲ್ಲು ಎಸೆದು ಕಳ್ಳರು ಎಸ್ಕೇಪ್ ; ಸಿನಿಮೀಯ ಶೈಲಿಯಲ್ಲಿ ನಡೆದ ಘಟನೆ..!

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಕಳ್ಳರನ್ನು ಹಿಡಿಯಲು ಹೋದಾಗ ಪೊಲೀಸರ ವಾಹನದ ಮೇಲೆಯೇ ಕಲ್ಲು ತೂರಿ ಕಳ್ಳರು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರುಇ ಲೆಕ್ಕಿಸದೇ ಪೊಲೀಸರ ಮೇಲೆ ಕಲ್ಲುಗಳನ್ನು ತೂರಿ ತಪ್ಪಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಕಳ್ಳರು ಬೊಲೆರೋ ವಾಹನದಲ್ಲಿ ಹೋಗುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ಅಡ್ಡಗಟ್ಟಿದ್ದರು. ಆದರೆ ಚಾಲಾಕಿ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಏಕಾಏಕಿ ಕಳ್ಳರು ದಾಳಿ ಮಾಡಿದ ಕೂಡಲೇ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಕೂಡಾ ಮಾಡಿದ್ದಾರೆ. ಆದರೂ ಕಳ್ಳರು ತಪ್ಪಿಸಿಕೊಂಡಿದ್ದಾರೆ.

ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿದೆ. ಸುಮಾರು 7 ಮಂದಿ ಗ್ಯಾಂಗ್‌ ಆಂಧ್ರಪ್ರದೇಶದ  ವಾಹನದ ನಂಬರ್ ಹೊಂದಿದ್ದ ಬೊಲೆರೋ ವಾಹನದಲ್ಲಿ ಬಂದಿದ್ದರು. ಇದನ್ನೂ ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ  ನಾಯನಹಟ್ಟಿ ಪೊಲೀಸರು, ವಾಹನ ತಡೆದು ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಾಹನ ನಿಲ್ಲಿಸದೇ ಖತರ್ನಾಕ್‌ ಕಳ್ಳರು, ಗುಂಪು ಪೊಲೀಸರ ಕಡೆಗೆ ಕಲ್ಲು ತೂರಿದ್ದಾರೆ. ದರೋಡೆಕೋರರು ಎಂಬ ಅನುಮಾನದಿಂದ ಪೊಲೀಸರು ಅಲರ್ಟ್ ಆಗಿದ್ದಾರೆ.

ಬೊಸೇದೇವರಹಟ್ಟಿ, ಕೋಟೆ ನಗರ ಒಳ ಮಾರ್ಗದಲ್ಲಿ ಕುದಾಪುರ ಕಡೆ ಬರುತ್ತಿದ್ದ ಕಳ್ಳರಿಗೆ, ಪೊಲೀಸರು ಮನಮಯ್ಯನಹಟ್ಟಿ ಕುದಾಪುರ ಒಳ ಮಾರ್ಗದಲ್ಲಿ ಎದುರಾಗಿದ್ದಾರೆ. ನಾಯಕನಹಟ್ಟಿ ಠಾಣೆ ಪಿಎಸ್‌ಐ ಶಿವಕುಮಾರ್ ನೇತೃತ್ವದ ತಂಡ ಬುಲೇರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಸ್ಥಳಕ್ಕೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ  ಚಳ್ಳಕೆರೆ ಡಿವೈಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ನಡೆದ ಘಟನೆ ಕುರಿತು ಸ್ಥಳೀಯ೩ ಮತ್ತು ಪೊಲೀಸರಿಂದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಪೊಲೀಸರ ಮೇಲೆ ಕಳ್ಳರ ದಾಳಿ ಸುದ್ದಿ ತಿಳಿದು ಸ್ಥಳೀಯರು ಆತಂಕಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *