Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಜೂನ್ 28 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಜೂನ್. 22 : ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ.ಗಳ ಹಗರಣ ನಡೆದಿರುವುದರಿಂದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಜೂನ್ 28 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಸಂಬಂಧ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ 187 ಕೋಟಿ ರೂ.ಗಳನ್ನು ಆಂಧ್ರದ ಚುನಾವಣೆಗೆ ಸಾಗಿಸಲಾಗಿದೆ. ಇದರ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯದಿಂದ ಅನೇಕ ಮುಖಂಡರುಗಳು ಆಗಮಿಸಲಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ ಇವರುಗಳು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ.ಮುಖಂಡರುಗಳಾದ ಕೆ.ಟಿ.ಕುಮಾರಸ್ವಾಮಿ, ಎಸ್ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ದೇವರಾಜ್ ಹೊಸದುರ್ಗ, ನವೀನ್ ಚಳ್ಳಕೆರೆ, ಎಸ್ಟಿ.ಮೋರ್ಚಾ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಮಧ್ಯಸ್ಥಿಕೆ ಜನರಿಂದ ದಂಪತಿಗಳಿಗೆ ದಾರಿ ತಪ್ಪಿಸಲಿದ್ದಾರೆ, ಈ ರಾಶಿಯವರಿಗೆ ಶತ್ರುಪೀಡೆ ಅಧಿಕ

ಈ ರಾಶಿಯವರಿಗೆ ಮಧ್ಯಸ್ಥಿಕೆ ಜನರಿಂದ ದಂಪತಿಗಳಿಗೆ ದಾರಿ ತಪ್ಪಿಸಲಿದ್ದಾರೆ, ಈ ರಾಶಿಯವರಿಗೆ ಶತ್ರುಪೀಡೆ ಅಧಿಕ, ಶುಕ್ರವಾರ ರಾಶಿ ಭವಿಷ್ಯ -ಜೂನ್-28,2024 ಸೂರ್ಯೋದಯ: 05:48, ಸೂರ್ಯಾಸ್ತ : 06:50 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ

ಬಹುನಿರೀಕ್ಷಿತ ಪ್ರಭಾಸ್ ನಟನೆಯ ‘ಕಲ್ಕಿ 2898AD’ ಸಿನಿಮಾ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕ : ಹೇಗಿದೆ ಸಿನಿಮಾ..?

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898AD ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಪ್ರಭಾಸ್ ನಟನೆಯ ಈ ಸಿನಿಮಾ ಬಗ್ಗೆ ಕುತೂಹಲವೂ ಹೆಚ್ಚಿತ್ತು. ಇಂದು ದೇಶದಾದ್ಯಂತ ಸಿನಿಮಾ ರಿಲೀಸ್ ಆಗಿದೆ‌. ಅಭಿಮಾನಿಗಳು ಕೂಡ ಅದ್ದೂರಿಯಾಗಿ

ಕಳೆದ ವರ್ಷವೇ ಪ್ರಾಯೋಗಿಕ ಸಂಚಾರವಾಗಿದ್ದರು ಬೆಳಗಾವಿಗ್ಯಾಕೆ ವಂದೇ ಭಾರತ್ ಬಿಟ್ಟಿಲ್ಲ..?

ಬೆಳಗಾವಿ: ಕಳೆದ ವರ್ಷ ಅಂದ್ರೆ 2023ರಲ್ಲಿಯೇ ಬೆಳಗಾವಿಯಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿತ್ತು. ಆದರೆ ಆಮೇಲೆ ಅದರ ಸುಳಿವು ಇಲ್ಲ. ಇಲ್ಲಿವರೆಗೂ ಬೆಂಗಳೂರು-ಧಾರವಾಡ-ಹುಬ್ಬಳ್ಳಿ ಮಾರ್ಗದ ವಂದೇಭಾರತ್ ರೈಲು ಸಂಚಾರ ಆರಂಭವಾಗಿಲ್ಲ. ಬೆಳಗಾವಿಗೆ ವಂದೇ ಭಾರತ್ ರೈಲು

error: Content is protected !!