ಸುದ್ದಿಒನ್, ಚಿತ್ರದುರ್ಗ, ಜೂನ್. 02 : ನಗರದ ದೊಡ್ಡಪೇಟೆಯ ಕರುವಿನಕಟ್ಟೆ ಸರ್ಕಲ್ ವಾಸಿ ದಿವಂಗತ ಗಂಗೋಜಿರಾವ್ ರವರ ಧರ್ಮಪತ್ನಿ ಹಾಗೂ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್ ಗುಜ್ಜಾರ್ ಇವರ ತಾಯಿ ಶ್ರೀಮತಿ ತಾರಾಬಾಯಿ ಗುಜ್ಜಾರ್ (94) ಸೋಮವಾರ ಮಧ್ಯಾಹ್ನ 1-30 ಕ್ಕೆ ನಿಧನರಾದರು.
ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.






