ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 : ನಗರದ ಕಬೀರಾನಂದ ನಗರದ ವಾಸಿ, ನಿವೃತ್ತ ಎಎಸ್‌ಐ ಟಿ.ಕೃಷ್ಣಪ್ಪ (75) ಅನಾರೋಗ್ಯದಿಂದ ಶನಿವಾರ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ನಗರದ ಜೋಗಿಮಟ್ಟಿ ರಸ್ತೆ ಕೆಂಚಪ್ಪನ ಬಾವಿ ಬಳಿಯ ರುದ್ರಭೂಮಿಯಲ್ಲಿ ನಾಳೆ ( ಮಾ.30ರ) ಬೆಳಗ್ಗೆ ಸುಮಾರು 11 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.


