ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ಮಾಳಪ್ಪನಹಟ್ಟಿ ಸಮೀಪವಿರುವ ತೀಕ್ಷ್ಮ ಅಂಧರ ಪುನಶ್ಚೇತನ ಶಾಲೆಯಲ್ಲಿ ನವ ಕ್ರಾಂತಿ ಸೇವಾ ಸಮಿತಿಯಿಂದ ಭಾನುವಾರ ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಆಚರಿಸಲಾಯಿತು.
ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರವರಲ್ಲಿದ್ದ ದೇಶ ಭಕ್ತಿಯನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳುವಂತೆ ನವ ಕ್ರಾಂತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಪಿ.ಮಹಾಂತೇಶ್ ಮಕ್ಕಳಿಗೆ ತಿಳಿಸಿದರು.
ನವ ಕ್ರಾಂತಿ ಸೇವಾ ಸಮಿತಿ ರಾಜ್ಯಾಧ್ಯಕ್ಷ ಆರ್.ಪ್ರದೀಪ್‍ಕುಮಾರ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ, ಜಿಲ್ಲಾಧ್ಯಕ್ಷ ಮೋಹನ್ ಸಿ.ಆರ್. ಖಜಾಂಚಿ ಆನಂದ್ ಪೈಲೆಟ್ ಸಂಘಟನಾ ಕಾರ್ಯದರ್ಶಿ ವರುಣ್‍ಕುಮಾರ್, ವಿನಾಯಕ, ಸುನೀಲ್‍ಕುಮಾರ್, ಬಸವರಾಜ್, ಪ್ರದೀಪ್, ಮನೋಜ್, ಮಂಜು, ಜಗದೀಶ್, ಮಂಜುನಾಥ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.